Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಸಿ. ರಾಜಗೋಪಾಲಾಚಾರಿಯವರನ್ನು ಅವರ ಜನ್ಮ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿ


ಶ್ರೀ ಸಿ. ರಾಜಗೋಪಾಲಾಚಾರಿಯವರ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಜಗೋಪಾಲಾಚಾರಿಯವರು ಬಹುಮುಖಿ ವ್ಯಕ್ತಿತ್ವವಾಗಿದ್ದು, ಆಡಳಿತ, ಸಾಹಿತ್ಯ ಮತ್ತು ಸಾಮಾಜಿಕ ಸಬಲೀಕರಣದ ಮೇಲೆ ಪ್ರಬಲವಾದ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು.

Xನ ಪೋಸ್ಟ್ ನಲ್ಲಿ, ಪ್ರಧಾನಮಂತ್ರಿಯವರು:

“ಶ್ರೀ ಸಿ. ರಾಜಗೋಪಾಲಾಚಾರಿಯವರ ಜನ್ಮ ದಿನಾಚರಣೆಯಂದು ಅವರನ್ನು ಮನಸಾರೆ ಸ್ಮರಿಸುತ್ತೇನೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಶ್ರೀಮಂತ ಕೊಡುಗೆ ಮತ್ತು ಭಾರತವು ಪ್ರಗತಿಯತ್ತ ಸಾಗುವ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದು, ಆಡಳಿತ, ಸಾಹಿತ್ಯ ಮತ್ತು ಸಾಮಾಜಿಕ ಸಬಲೀಕರಣದ ಮೇಲೆ ಬಲವಾದ ಪ್ರಭಾವ ಬೀರಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಘನತೆ ಮತ್ತು ಗೌರವದ ಸಮೃದ್ಧಿಯ ಜೀವನವನ್ನು ನಡೆಸಲು ರಾಜಾಜಿಯವರ ತತ್ವಗಳು ನಮಗೆ ಸ್ಫೂರ್ತಿ ನೀಡುತ್ತವೆ” ಎಂದು ಹೇಳಿದ್ದಾರೆ.

 

 

*****