Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಮಿಕ್ ಜಾಗರ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿ 


ಸಂಗೀತ ದಿಗ್ಗಜ ಶ್ರೀ ಮಿಕ್ ಜಾಗರ್ ಅವರ ಸಂದೇಶಕ್ಕೆ ಸ್ಪಂದಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರತಿಕ್ರಿಯಿಸಿದ್ದಾರೆ.

ಶ್ರೀ ಜಾಗರ್ ಅವರು ಭಾರತದಲ್ಲಿರುವುದಕ್ಕೆ ತಮ್ಮ ಸಂತೋಷದ ಬಗ್ಗೆ ಸಂದೇಶ ತಿಳಿಸಿದ್ದಾರೆ. ಪ್ರಧಾನಮಂತ್ರಿಯವರು ತಮ್ಮ ಕೆಲವು ಪ್ರಸಿದ್ಧ ಹಾಡುಗಳನ್ನು ಉಲ್ಲೇಖಿಸಿ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ;
“‘ನೀವು ಯಾವಾಗಲೂ ನಿಮಗೆ ಬೇಕಾದುದನ್ನು ಮಾತ್ರ ಪಡೆಯಲು ಸಾಧ್ಯವಿಲ್ಲ’, ಆದರೆ ಭಾರತವು ಅನ್ವೇಷಕರಿಂದ ತುಂಬಿರುವ ಭೂಮಿಯಾಗಿದ್ದು, ಎಲ್ಲರಿಗೂ ಸಾಂತ್ವನ ಮತ್ತು ‘ತೃಪ್ತಿ’ ನೀಡುತ್ತದೆ.

ಇಲ್ಲಿನ ಜನರು ಮತ್ತು ಸಂಸ್ಕೃತಿಯಲ್ಲಿ ನೀವು ಸಂತೋಷವನ್ನು ಕಂಡುಕೊಂಡಿದ್ದೀರಿ ಎಂದು ತಿಳಿದು ಬಹಳ ಸಂತೋಷವಾಯಿತು.

ಆಗಾಗ ಭೇಟಿ ನೀಡುತ್ತಾ ಇರಿ…”

***