Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಬುದ್ಧದೇವ್ ದಾಸ್ ಗುಪ್ತಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಿತ್ರ ನಿರ್ಮಾಪಕ, ಚಿಂತಕ ಮತ್ತು ಕವಿ ಶ್ರೀ ಬುದ್ಧದೇವ್ ದಾಸ್ ಗುಪ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: “ಶ್ರೀ ಬುದ್ಧದೇವ್ ದಾಸ್ ಗುಪ್ತಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ವೈವಿಧ್ಯಮಯ ಕೃತಿಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪಿವೆ. ಅವರು ಪ್ರಖ್ಯಾತ ಚಿಂತಕ ಮತ್ತು ಕವಿಯೂ ಆಗಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಹಲವಾರು ಅಭಿಮಾನಿಗಳೊಂದಿಗೆ ನನ್ನ ಸಂವೇದನೆ ಇದೆ. ಓಂ ಶಾಂತಿ.” ಎಂದು ತಿಳಿಸಿದ್ದಾರೆ.

***