Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಬಿಲ್ ಗೇಟ್ಸ್ ಅವರಿಂದ ಪ್ರಧಾನಮಂತ್ರಿಗಳ ಭೇಟಿ 


ಶ್ರೀ ಬಿಲ್ ಗೇಟ್ಸ್ ಅವರು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಭಾರತದ ಅಭಿವೃದ್ಧಿ, 2047ರ ವಿಕಸಿತ ಭಾರತದ ಹಾದಿ ಮತ್ತು ಪ್ರಸ್ತುತದಲ್ಲಿ ಪ್ರಭಾವ ಬೀರುತ್ತಿರುವ ಆರೋಗ್ಯ, ಕೃಷಿ, ಕೃತಕ ಬುದ್ಧಿಮತ್ತೆ ಮತ್ತು ಇತರ ವಲಯಗಳ ಅತ್ಯಾಕರ್ಷಕ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದ್ದಾಗಿ ಶ್ರೀ ಬಿಲ್ ಗೇಟ್ಸ್ ಅವರು ಹೇಳಿದ್ದಾರೆ.

ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನಾವಿನ್ಯತೆ, ಸುಸ್ಥಿರತೆ ಸೇರಿದಂತೆ ಅನೇಕ ವಿಷಯಗಳ ಕುರಿತು ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ಮಾತನಾಡಿದ್ದಾಗಿ ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: 

“ಎಂದಿನಂತೆ, ಬಿಲ್ ಗೇಟ್ಸ್ ಅವರೊಂದಿಗೆ ಅತ್ಯುತ್ತಮ ಚರ್ಚೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನಾವಿನ್ಯತೆ, ಸುಸ್ಥಿರತೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಕುರಿತು ನಾವು ಮಾತನಾಡಿದೆವು.”

 

 

*****