ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿಜು ಪಟ್ನಾಯಕ್ ಅವರನ್ನು ಅವರ ಜನ್ಮ ಜಯಂತಿಯಂದು ಸ್ಮರಿಸಿದರು. ಒಡಿಶಾದ ಅಭಿವೃದ್ಧಿ ಮತ್ತು ಜನರ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದರು.
ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ, ಅವರು ಹೀಗೆ ಬರೆದಿದ್ದಾರೆ:
“ಬಿಜು ಬಾಬು ಅವರನ್ನು ಅವರ ಜನ್ಮದಿನದಂದು ಸ್ಮರಿಸುತ್ತೇನೆ. ಒಡಿಶಾದ ಅಭಿವೃದ್ಧಿ ಮತ್ತು ಜನರ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ನಾವು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಅವರು ಪ್ರಜಾಪ್ರಭುತ್ವದ ಆದರ್ಶಗಳಿಗೆ ಬಲವಾಗಿ ಬದ್ಧರಾಗಿದ್ದರು, ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದರು,’’ ಎಂದು ಹೇಳಿದ್ದಾರೆ.
*****
Remembering Biju Babu on his birth anniversary. We fondly recall his contribution towards Odisha’s development and empowering people. He was also staunchly committed to democratic ideals, strongly opposing the Emergency.
— Narendra Modi (@narendramodi) March 5, 2025