ಶ್ರೀ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯ ತಿಥಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವ ನಮನ ಸಲ್ಲಿಸಿದರು. ಶ್ರೀ ಠಾಕ್ರೆ ಅವರು ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮರಾಠಿ ಜನತೆಯ ಸಬಲೀಕರಣದ ಕಾರಣಕ್ಕಾಗಿ ಹೋರಾಡಿದ, ಹಾಗೂ ದೂರದೃಷ್ಟಿ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಶ್ರೀ ಮೋದಿ ಅವರು ಹೇಳಿದರು.
ತಮ್ಮ ಎಕ್ಸ್ ಖಾತೆಯಲ್ಲಿನ ಸಂದೇಶದಲ್ಲಿ, ಅವರು ಈ ರೀತಿ ಹೇಳಿದ್ದಾರೆ:
“ಮಹಾನ್ ಶ್ರೀ ಬಾಳಾಸಾಹೇಬ್ ಠಾಕ್ರೆ ಜಿ ಅವರ ಪುಣ್ಯ ತಿಥಿಯಂದು ಅವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮರಾಠಿ ಜನತೆಯ ಸಬಲೀಕರಣದ ಕಾರಣಕ್ಕಾಗಿ ಅವರು ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ನೈತಿಕತೆಯ ಹೆಮ್ಮೆಯನ್ನು ಹೆಚ್ಚಿಸುವಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದರು. ಅವರ ದಿಟ್ಟ ಧ್ವನಿ ಮತ್ತು ಅಚಲವಾದ ಚೈತನ್ಯವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ”
*****
I pay homage to the great Balasaheb Thackeray Ji on his Punya Tithi. He was a visionary who championed the cause of Maharashtra’s development and the empowerment of Marathi people. He was a firm believer in enhancing the pride of Indian culture and ethos. His bold voice and…
— Narendra Modi (@narendramodi) November 17, 2024
महान बाळासाहेब ठाकरे जी यांच्या पुण्यतिथीनिमित्त मी त्यांना आदरांजली अर्पण करतो. महाराष्ट्राचा विकास आणि मराठी लोकांच्या सक्षमता यासाठी आग्रही असे ते एक द्रष्टे व्यक्तिमत्व होते. भारतीय संस्कृती आणि मूल्यांचे संवर्धन करून त्याविषयीचा अभिमान वृद्धिंगत करण्यावर त्यांचा दृढ…
— Narendra Modi (@narendramodi) November 17, 2024