Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಶ್ರೀ ಬಂಗಾರು ಅಡಿಗಲಾರ್ ಜೀ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ


ಶ್ರೀ ಬಂಗಾರು ಅಡಿಗಲಾರ್ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

X ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

“ಶ್ರೀ ಬಂಗಾರು ಅಡಿಗಲಾರ್ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನವು ಎಂದೆಂದಿಗೂ ಅನೇಕರಿಗೆ ಮಾರ್ಗದರ್ಶಿ ಬೆಳಕಾಗಿರುತ್ತದೆ. ಮಾನವೀಯತೆಗೆ ತಮ್ಮ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ, ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜಗಳನ್ನು ಬಿತ್ತಿದರು. ಅವರ ಕೆಲಸವು ತಲೆಮಾರುಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.

***