Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಗುರು ನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ. ಗುರು ನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ಈ ವಿಶೇಷ ಸಂದರ್ಭದಲ್ಲಿ ದೇವ್ ಜಿ ಅವರ ಧಾರ್ಮಿಕ ಚಿಂತನೆ ಮತ್ತು ಉದಾತ್ತ ಆದರ್ಶಗಳನ್ನು ಶ್ರೀ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಶ್ರೀ ಗುರು ನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ವಿಶೇಷ ಸಂದರ್ಭದಲ್ಲಿ ದೇವ್ ಜಿ ಅವರ ಧಾರ್ಮಿಕ ಚಿಂತನೆ ಮತ್ತು ಉದಾತ್ತ ಆದರ್ಶಗಳನ್ನು ನಾನು ಸ್ಮರಿಸುತ್ತೇನೆ. ಅವರ ನ್ಯಾಯಯುತ, ಸಹಾನುಭೂತಿ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜದ ದೂರದೃಷ್ಟಿಯ ಚಿಂತನೆಯು ನಮಗೆ ಸ್ಪೂರ್ತಿ ನೀಡುತ್ತದೆ. ಶ್ರೀ ಗುರುನಾನಕ್ ದೇವ್ ಜಿ ಅವರ ಇತರರ ಸೇವೆಗೆ ಒತ್ತು ನೀಡುವ ಅವರ ಗುಣ ಪ್ರೇರಣಾದಾಯಕ’’ ಎಂದು ಹೇಳಿದ್ದಾರೆ.

***