Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಕೆ. ಕಾಮರಾಜ್ ಅವರ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಕೆ. ಕಾಮರಾಜ್ ಅವರ ಜಯಂತಿಯ ಸಂದರ್ಭದಲ್ಲಿ ಅವರನ್ನು ಸ್ಮರಿಸಿದ್ದಾರೆ. ಶ್ರೀ ಕೆ.ಕಾಮರಾಜ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಳಿಸಲಾಗದ ಕೊಡುಗೆಯನ್ನು ನೀಡಿದ್ದಾರೆ ಮತ್ತು ಸಹಾನುಭೂತಿಯುಳ್ಳ ಆಡಳಿತಗಾರರಾಗಿ ಛಾಪು ಮೂಡಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಈ ಕುರಿತು ಪ್ರಧಾನಿ ಹೀಗೆ ಟ್ವೀಟಿಸಿದ್ದಾರೆ:

“ಶ್ರೀ ಕೆ. ಕಾಮರಾಜ್ ಅವರ ಜನ್ಮದಿನದಂದು ಅವರನ್ನು ಸ್ಮರಿಸಲಾಯಿತು. ಕಾಮರಾಜ್‌ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಳಿಸಲಾಗದ ಕೊಡುಗೆಯನ್ನು ನೀಡಿದರು ಮತ್ತು ಸಹಾನುಭೂತಿಯುಳ್ಳ ಆಡಳಿತಗಾರರಾಗಿ ಛಾಪು ಮೂಡಿಸಿದರು. ಬಡತನ ಮತ್ತು ಮಾನವ ಸಂಕಟಗಳನ್ನು ನಿವಾರಿಸಲು ಅವರು ಶ್ರಮಿಸಿದರು. ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಯತ್ತ ಅವರು ಗಮನ ಹರಿಸಿದರು.”

 

 

***********