Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗಿನ ಸಂಭಾಷಣೆಯಲ್ಲಿ ದ್ವಿಪಕ್ಷೀಯ ತಂತ್ರಜ್ಞಾನ ಸಹಕಾರದ ಸಾಮರ್ಥ್ಯವನ್ನು ಪ್ರಧಾನಮಂತ್ರಿಯವರು ಮಹತ್ವಪೂರ್ಣವಾಗಿ ಹೇಳಿದ್ದಾರೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗೆ ರಚನಾತ್ಮಕ ಸಂವಾದ ನಡೆಸಿದರು. ಇಬ್ಬರೂ ಪರಸ್ಪರ ಹಿತಾಸಕ್ತಿಯ ವಿಷಯಗಳ ವ್ಯಾಪ್ತಿಯನ್ನು ಪರಿಶೀಲಿಸಿ ಸಂವಾದ ನಡೆಸಿದರು. ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಇವರಿಬ್ಬರ ಸಭೆಯ ಸಂದರ್ಭದಲ್ಲಿ ನಡೆದ ಚರ್ಚೆಯ ವಿಷಯಗಳನ್ನು ಇಬ್ಬರು ನಾಯಕಯರು ಮರುಪರಿಶೀಲಿಸಿಕೊಂಡರು. ಇವರು ಸಂವಹನವು ತಾಂತ್ರಿಕ ಪ್ರಗತಿಗಾಗಿ ಹಂಚಿಕೆಯ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ.

ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಹಯೋಗದ ಅಪಾರ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಮಹತ್ವ ನೀಡಿ ವಿವರಿಸಿದರು. ಈ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮುಂದುವರಿಸಲು ಭಾರತದ ದೃಢವಾದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

 ಅವರು ತಮ್ಮ ಎಕ್ಸ್  ಸಂದೇಶದಲ್ಲಿ ಈ ರೀತಿ ಬರೆದಿದ್ದಾರೆ:

“ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ನಮ್ಮ ನುಡುವಿನ ಸಭೆಯಲ್ಲಿ ನಾವು ಪರಸ್ಪರ ಚರ್ಚಿಸಿ ಒಳಗೊಂಡಿರುವ ವಿಷಯಗಳು ಸೇರಿದಂತೆ @elonmusk ಅವರೊಂದಿಗೆ  ಇಂದು ವಿವರವಾಗಿ ಮಾತನಾಡಿದ್ದೇನೆ ಮತ್ತು ಇತರೆ ವಿವಿಧ ವಿಷಯಗಳ ಕುರಿತು ಕೂಡ ನಾವಿಬ್ಬರು ಮಾತನಾಡಿದ್ದೇವೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಯೋಗದ ಅಪಾರ ಸಾಮರ್ಥ್ಯವನ್ನು ನಾವು ಚರ್ಚಿಸಿದ್ದೇವೆ. ಈ ಕ್ಷೇತ್ರಗಳಲ್ಲಿ ಯುನೈಟೆಡ್ ಸ್ಟೇಟ್ಸ್( ಯು.ಎಸ್)  ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ಧವಾಗಿದೆ.”

*****