Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಎಂ.ಟಿ.ವಾಸುದೇವನ್ ನಾಯರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಮಲಯಾಳಂ ಚಿತ್ರರಂಗ ಮತ್ತು ಸಾಹಿತ್ಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾದ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಾನವ ಭಾವನೆಗಳ ಆಳವಾದ ಅನ್ವೇಷಣೆಯೊಂದಿಗೆ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಜಿ ಅವರ ಕೃತಿಗಳು ಹಲವು ಪೀಳಿಗೆಗಳನ್ನು ರೂಪಿಸಿವೆ ಮತ್ತು ಇನ್ನೂ ಅನೇಕರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ X ಸಾಮಾಜಿಕ ಮಾಧ್ಯಮ  ಜಾಲತಾಣದಲ್ಲಿ ಹೀಗೆ ಹೇಳಿದ್ದಾರೆ.

“ಮಲಯಾಳಂ ಚಿತ್ರರಂಗ ಮತ್ತು ಸಾಹಿತ್ಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾದ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಜಿ ಅವರ ನಿಧನದಿಂದ ದುಃಖವಾಗಿದೆ. ಅವರ ಕೃತಿಗಳು, ಮಾನವ ಭಾವನೆಗಳ ಆಳವಾದ ಪರಿಶೋಧನೆಯೊಂದಿಗೆ ಹಲವು ಪೀಳಿಗೆಗಳನ್ನು ರೂಪಿಸಿವೆ ಮತ್ತು ಇನ್ನೂ ಹಲವರಿಗೆ ಪ್ರೇರೇಣೆ ನೀಡುವುದನ್ನು ಮುಂದುವರಿಸಿವೆ. ಅವರು ಮೌನ ಮತ್ತು ದುರ್ಬಲ ವರ್ಗದಲ್ಲಿರುವವರಿಗೆ ಧ್ವನಿ ನೀಡಿದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

 

*****