Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಆನಂದ್ ಶಂಕರ್ ಪಾಂಡ್ಯ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಶ್ರೀ ಆನಂದ್ ಶಂಕರ್ ಪಾಂಡ್ಯ ಜೀಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಗ್ಗೆ ಸರಣಿ ಟ್ವೀಟ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ: “ಶ್ರೀ ಆನಂದ್ ಶಂಕರ್ ಪಾಂಡ್ಯ ಜೀ ಅವರು ಇತಿಹಾಸ, ಸಾರ್ವಜನಿಕ ನೀತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ವ್ಯಾಪಕ ಬರವಣಿಗೆಯ ಕೊಡುಗೆ ನೀಡಿದ ಮಹಾನ್‌ ಲೇಖಕರು ಮತ್ತು ಸಾರ್ವಜನಿಕ ಬುದ್ದಿಜೀವಿಯಾಗಿದ್ದರು. ಭಾರತದ ಬೆಳವಣಿಗೆಯ ಬಗ್ಗೆ ಅವರು ಉತ್ಸುಕರಾಗಿದ್ದರು. ಅವರು ವಿಎಚ್‌ಪಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಸಮಾಜ ಸೇವೆಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ.

ಶ್ರೀ ಆನಂದ್ ಶಂಕರ್ ಪಾಂಡ್ಯ ಜೀ ಅವರೊಂದಿಗೆ ನಾನು ನಡೆಸಿದ ಅನೇಕ ಸಂವಾದಗಳು ನನಗೆ ನೆನಪಾಗುತ್ತಿವೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಅವರ ಒಡನಾಟ ಮತ್ತು ವಿಷಯಗಳ ಒಳನೋಟಗಳ ಹಲವಾರು ಕಥೆಗಳನ್ನು ಅವರಿಂದ ಕೇಳಿ ಸಂತೋಷವಾಯಿತು. ಅವರ ಕುಟುಂಬದೊಂದಿಗೆ ಮಾತನಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದೇನೆ. ಓಂ ಶಾಂತಿ.”

***