Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಹಿಂದ್ ಫೀಡರ್ ನಾಲೆ ಹಾಗೂ ರಾಜಸ್ಥಾನ್ ಫೀಡರ್ ನಾಲೆಗಳ ಒಳ ಆವರಣದ ಲೇಪನಕ್ಕೆ 825 ಕೋಟಿ ರೂ. ಹಣಕಾಸು ನೆರವು ನೀಡಲು ಸಂಪುಟ ಸಮ್ಮತಿ ಜೋಡಿ ಯೋಜನೆಯಿಂದ ಪಂಜಾಬ್‍ನ ಮುಕ್ತ್‍ಸರ್, ಫರೀದ್‍ಕೋಟ್ ಹಾಗೂ ಫಿರೋಜ್‍ಪುರ್‍ದಲ್ಲಿ ಜೌಳು ಹಿಡಿಯುವಿಕೆಗೆ ತಡೆ


ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಜಸ್ಥಾನ್ ಫೀಡರ್ ನಾಲೆ ಮತ್ತು ಶ್ರೀಹಿಂದ್ ಫೀಡರ್ ನಾಲೆಗಳ ಒಳ ಆವರಣದ ಮರು ಲೈನಿಂಗ್ ಕಾಮಗಾರಿ ಅನುಷ್ಠಾನಕ್ಕೆ ಮುಂದಿನ ಐದು ವರ್ಷದಲ್ಲಿ(2018-19 ರಿಂದ 2022-2023) ಕ್ರಮವಾಗಿ 620.42 ಕೋಟಿ ಹಾಗೂ 205.758 ಕೋಟಿ ರೂ. ನೆರವು ನೀಡಲು ಸಮ್ಮತಿಸಲಾಗಿದೆ. ಶ್ರೀಹಿಂದ್ ಫೀಡರ್ ನಾಲೆಯ ಆರ್‍ಡಿ 119700-447927 ಹಾಗೂ ರಾಜಸ್ಥಾನ್ ಫೀಡರ್ ನಾಲೆಯ ಆರ್‍ಡಿ 179000-496000 ವರೆಗೆ ಮರುಲೈನಿಂಗ್ ಮಾಡಲಾಗುತ್ತದೆ.

 

ಪರಿಣಾಮ:

1. ಈ ಜೋಡಿ ಯೋಜನೆಯ ಅನುಷ್ಠಾನದಿಂದ ನೈರುತ್ಯ ಪಂಜಾಬ್‍ನ ಮುಕ್ತ್‍ಸರ್, ಫರೀದ್‍ಕೋಟ್ ಹಾಗೂ ಫಿರೋಜ್‍ಪುರ ಜಿಲ್ಲೆಗಳ 84,800 ಹೆಕ್ಟೇರ್ ಭೂಮಿಯ ಜೌಳು ಹಿಡಿಯುವಿಕೆ ಸಮಸ್ಯೆಯ ನಿವಾರಣೆಗೆ ನೆರವಾಗಲಿದೆ.

2.  ಯೋಜನೆಯ ಅನುಷ್ಠಾನದಿಂದ ನೈರುತ್ಯ ಪಂಜಾಬ್‍ನ ಜೌಳು ಹಿಡಿಯುವಿಕೆ ಸಮಸ್ಯೆ ನಿವಾರಣೆ ಆಗಲಿದೆ ಹಾಗೂ ಎರಡೂ ನಾಲೆಗಳಲ್ಲಿ ನೀರಿನ ಹರಿವು/ಲಭ್ಯತೆ ಹೆಚ್ಚಲಿದೆ.

3. ರಾಜಸ್ಥಾನ ಫೀಡರ್ ನಾಲೆಯ ಮರುಲೈನಿಂಗ್‍ನಿಂದ 98,739 ಹೆಕ್ಟೇರ್ ಹಾಗೂ ಶ್ರೀಹಿಂದ್ ಫೀಡರ್ ನಾಲೆಯ ಮರುಲೈನಿಂಗ್‍ನಿಂದ 69,086 ಹೆಕ್ಟೇರ್ ಭೂಮಿಗೆ ನೀರಾವರಿ ಸ್ಥಿರೀಕರಣ ಮತ್ತು ಉತ್ತಮಗೊಳ್ಳಲಿದ್ದು, ಈ ಪ್ರದೇಶದ ರೈತರಿಗೆ ಪ್ರಯೋಜನ ಆಗಲಿದೆ.

ವೆಚ್ಚ:

* ರಾಜಸ್ಥಾನ್ ಮತ್ತು ಶ್ರೀಹಿಂದ್ ಫೀಡರ್‍ಗಳಿಗೆ ಎಲ್‍ಟಿಐಎಫ್ ಅಡಿಯಲ್ಲಿ 99 ಪಿಎಂಎಸ್‍ಕೆವೈ-ಏಐಬಿಪಿ ಯೋಜನೆಗಳಿಗೆ ನಬಾರ್ಡ್ ಹಣಕಾಸು ನೆರವು ನೀಡಲಿದೆ.

* ಕೇಂದ್ರ ಜಲ ಆಯೋಗದ ಹಾಲಿ ಮೇಲುಸ್ತುವಾರಿ ವ್ಯವಸ್ಥೆಯಲ್ಲದೆ, ತಜ್ಞ ಯೋಜನಾ ಪರಿಶೀಲನೆ ಸಮಿತಿಯೊಂದನ್ನು ರಚಿಸಿ, ಈ ಯೋಜನೆಗಳ ಒಟ್ಟಾರೆ ಅನುಷ್ಠಾನದ  ಮೇಲುಸ್ತುವಾರಿ ಮಾಡಲಾಗುತ್ತದೆ.   

* 2015ರ ಪಿಎಲ್ ಪ್ರಕಾರ, ಶ್ರೀಹಿಂದ್ ಫೀಡರ್ ನಾಲೆಯ ಮರುಲೈನಿಂಗ್‍ಗೆ ಅಂಗೀಕೃತ ವೆಚ್ಚ 671.478 ಕೋಟಿ ರೂ. ಹಾಗೂ ರಾಜಸ್ಥಾನ ಫೀಡರ್ ನಾಲೆಯ ಮರುಲೈನಿಂಗ್ ವೆಚ್ಚ 1305.267 ಕೋಟಿ ರೂ. ಒಟ್ಟು ಅಂದಾಜು ವೆಚ್ಚದಲ್ಲಿ 826.168 ಕೋಟಿ ರೂ. ಕೇಂದ್ರ ನೀಡಲಿದೆ( ಶ್ರೀಹಿಂದ್ ಫೀಡರ್‍ಗೆ 205.758 ಕೋಟಿ ಹಾಗೂ ರಾಜಸ್ಥಾನ್ ಫೀಡರ್‍ಗೆ 620.41 ಕೋಟಿ ರೂ.)

* ಶ್ರೀಹಿಂದ್ ಫೀಡರ್ ನಾಲೆಗೆ 671.478 ಕೋಟಿ ರೂ. ಹಾಗೂ ರಾಜಸ್ಥಾನ್ ಫೀಡರ್ ನಾಲೆಗೆ 1,305.267 ಕೋಟಿ ರೂ. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಏಪ್ರಿಲ್ 6,2016ರಲ್ಲಿ ಹೂಡಿಕೆ ಅನುಮತಿ ಲಭ್ಯವಾಗಿದೆ.

* 2016ರಲ್ಲಿ ಸಿಡಬ್ಲ್ಯುಸಿ ಅಧ್ಯಕ್ಷರ ನೇತೃತ್ವದ ಸಮಿತಿ ಹಾಗೂ 2017ರಲ್ಲಿ ಸಿಡಬ್ಲ್ಯುಸಿಯ ಮಾಜಿ ಅಧ್ಯಕ್ಷ ಶ್ರೀ ಏ ಬಿ ಪಾಂಡ್ಯಾ ಅವರ ನೇತೃತ್ವದ ತಂಡ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದೆ. ಇಬ್ಬರೂ ಕೈಗೆತ್ತಿಕೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಿದ್ದಾರೆ. ಏಪ್ರಿಲ್ 26, 2018ರಲ್ಲಿ ಪಂಜಾಬ್ ಸರ್ಕಾರ ಕೂಡ ಹಣಕಾಸು ನೆರವು ನೀಡಲು ಸಮ್ಮತಿಸಿದೆ.

ಹಿನ್ನೆಲೆ:

ಶ್ರೀಹಿಂದ್ ಹಾಗೂ ರಾಜಸ್ಥಾನ್ ಫೀಡರ್‍ಗಳು ಹರಿಕೆಯಿಂದ ಆರಂಭವಾಗಿ ಪಂಜಾಬ್ ಮೂಲಕ ಹರಿದು, ರಾಜಸ್ಥಾನವನ್ನು ಸೇರುತ್ತವೆ. ಈ ಎರಡೂ ನಾಲೆಗಳು ಒಂದೇ ದಂಡೆಯನ್ನು ಹೊಂದಿವೆ. ಪಂಜಾಬ್ ಮತ್ತು ರಾಜಸ್ಥಾನದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು 1960ರಲ್ಲಿ ಈ ನಾಲೆಗಳನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಶ್ರೀಹಿಂದ್ ಹಾಗೂ ರಾಜಸ್ಥಾನ್ ಫೀಡರ್‍ಗಳ ಲೈನಿಂಗ್‍ಗೆ ಆದ ಹಾನಿಯಿಂದ ಗಮನಾರ್ಹ ಪ್ರಮಾಣದ ನೀರು ಸೋರಿ ಹೋಗುತ್ತಿದೆ ಎಂದು ಪಂಜಾಬ್ ಸರ್ಕಾರ ವರದಿ ಸಲ್ಲಿಸಿತ್ತು. ಇದರಿಂದಾಗಿ, ನಾಲೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದಲ್ಲದೆ, ಅಕ್ಕಪಕ್ಕದ ಜಮೀನು ಚೌಳು ಹಿಡಿದು, ನಷ್ಟವಾಗುತ್ತಿತ್ತು. ಮರುಲೈನಿಂಗ್‍ನಿಂದ ಚೌಳು ಹಿಡಿಯುವಿಕೆ ಕಡಿಮೆಯಾಗುವುದಲ್ಲದೆ, ನೀರಿನ ಹರಿವು/ಲಭ್ಯತೆ ಹೆಚ್ಚಲಿದೆ.