Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಲಂಕಾದ ಸಂಸತ್ ಸದಸ್ಯರಿಂದ ಪ್ರಧಾನಮಂತ್ರಿ ಭೇಟಿ

ಶ್ರೀಲಂಕಾದ ಸಂಸತ್ ಸದಸ್ಯರಿಂದ ಪ್ರಧಾನಮಂತ್ರಿ ಭೇಟಿ

ಶ್ರೀಲಂಕಾದ ಸಂಸತ್ ಸದಸ್ಯರಿಂದ ಪ್ರಧಾನಮಂತ್ರಿ ಭೇಟಿ


ಶ್ರೀಲಂಕಾದ ಸಂಸತ್ ಸದಸ್ಯರ ನಿಯೋಗ ಪ್ರಧಾನಮಂತ್ರಿ ಅವರನ್ನು ಭೇಟಿಮಾಡಿತು. ಬಹು ಪಕ್ಷಗಳ ನಿಯೋಗದ ನೇತೃತ್ವವನ್ನು ಶ್ರೀಲಂಕಾದ ಸಂಸತ್ ಅಧ್ಯಕ್ಷ ಘನತೆವೆತ್ತ ಶ್ರೀ ಕರು ಜಯಸೂರ್ಯ ಅವರು ವಹಿಸಿದ್ದರು.

ಸಂಸತ್ ಸದಸ್ಯರು ಭಾರತ ಮತ್ತು ಶ್ರೀಲಂಕಾ ನಡುವಣ ಐತಿಹಾಸಿಕ ಸಂಬಂಧಗಳು ಮತ್ತು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ಹಂಚಿಕೊಳ್ಳುವಿಕೆಗಳನ್ನು ವಿವರಿಸಿದರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ಬೆಸೆದ ಆಳವಾದ ಸಂಬಂಧಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭಾರತದ ಸಹಾಯದಿಂದ ಶ್ರೀಲಂಕಾದಲ್ಲಿ ಕಾರ್ಯರೂಪದಲ್ಲಿರುವ ಸಹಕಾರಿ ಜನಪರ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳನ್ನೂ ಕೂಡಾ ಅವರು ವಿವರಿಸಿದರು. ಜಂಟಿ ಆರ್ಥಿಕ ಯೋಜನೆಗಳ ವೇಗಗತಿಯ ಅನುಷ್ಠಾನದಿಂದ ಎರಡೂ ದೇಶಗಳ ಆರ್ಥಿಕತೆಗೆ ಮತ್ತು ಜನರಿಗೆ ಪ್ರಯೋಜನವಾಗಲಿದೆ ಎಂಬುದನ್ನು ನಿಯೋಗ ಒಪ್ಪಿಕೊಂಡಿತು.

ಪ್ರಧಾನಮಂತ್ರಿ ಅವರು ನಿಯೋಗವನ್ನು ಸ್ವಾಗತಿಸಿದರು ಮತ್ತು ಇಂತಹ ಸಂಪರ್ಕ ಕೊಂಡಿಗಳ ಆವಶ್ಯಕತೆ ಬಗ್ಗೆ ಒತ್ತಿಹೇಳಿದರು. ನೂತನ ಉಪಕ್ರಮಗಳ ಮೂಲಕ ಎರಡೂ ದೇಶಗಳ ಪ್ರಾಂತೀಯ ವಿಧಾನಸಭೆ ಮತ್ತು ಸ್ಥಳೀಯ ಚುನಾಯಿತ ಸಂಸ್ಥೆಗಳ ನಡುವಣ ಸಂಬಂಧಗಳು ಉತ್ತಮಗೊಳ್ಳುವ ಮೂಲಕ ಎರಡೂ ದೇಶಗಳ ಜನ-ಜನರ ನಡುವಣ ಸಂಬಂಧಗಳು ಮತ್ತು ವಿಶ್ವಾಸಗಳು ಇನ್ನೂ ಆಳವಾಗಿ ಬೆಸೆಯಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

***