ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶ್ರೀ. ರವಿ ಕರುಣಾನಾಯಕೆ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಕಳೆದ ತಿಂಗಳು ಅಂತಾರಾಷ್ಟ್ರೀಯ ವೈಶಾಖ ದಿನದ ಸಂದರ್ಭದಲ್ಲಿ ತಮ್ಮ ಫಲಪ್ರದ ಶ್ರೀಲಂಕಾ ಭೇಟಿಯನ್ನು ಪ್ರಧಾನಿ ಸ್ಮರಿಸಿದರು. ವಿದೇಶಾಂಗ ಸಚಿವರ ನೂತನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶ್ರೀ. ಕರುಣನಾಯಕೆ ಅವರನ್ನು ಪ್ರಧಾನಿ ಅಭಿನಂದಿಸಿದರು.
ಶ್ರೀಲಂಕಾದಲ್ಲಿ ಇತ್ತೀಚೆಗೆ ಪ್ರವಾಹ ಹಾಗೂ ಭೂಕುಸಿತದಿಂದ ಆದ ಪ್ರಾಣಹಾನಿ ಮತ್ತು ಹಾನಿಗೆ ಸಂತಾಪ ಸೂಚಿಸಿದರು. ಈ ನಿಟ್ಟಿನಲ್ಲಿ ಭಾರತದ ನೆರವಿನ ಮುಂದುವರಿಕೆಯ ಸನ್ನದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು.
ವಿದೇಶಾಂಗ ಸಚಿವ ರವಿ ಕರುಣನಾಯಕೆ ಅವರು ಭೂಕುಸಿತ ಮತ್ತು ಪ್ರವಾಹದ ಬಳಿಕ ತತ್ ಕ್ಷಣವೇ ನೆರವು ನೀಡಿದ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು. ಭಾರತದೊಂದಿಗೆ ಆಪ್ತ ಬಾಂಧವ್ಯವನ್ನು ಬಲಪಡಿಸುವ ಶ್ರೀಲಂಕಾದ ಬದ್ಧತೆಯನ್ನು ಅವರು ತಿಳಿಸಿದರು.
AKT/AK
Mr. Ravi Karunanayake, the Foreign Minister of Sri Lanka met PM @narendramodi. pic.twitter.com/MVu3KB7Qsq
— PMO India (@PMOIndia) June 6, 2017