Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಮತಿ ರೋಹಿಣಿ ಗೋಡ್ಬೋಲೆಯವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀಮತಿ ರೋಹಿಣಿ ಗೋಡ್ಬೋಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಮೋದಿಯವರು ಶ್ರೀಮತಿ ಗೋಡ್ಬೋಲೆ ಅವರನ್ನು ಪ್ರವರ್ತಕ ವಿಜ್ಞಾನಿ ಮತ್ತು ನಾವೀನ್ಯಕಾರ ಎಂದು ಶ್ಲಾಘಿಸಿದ್ದಾರೆ.  ಶ್ರೀಮತಿ ರೋಹಿಣಿ ಗೋಡ್ಬೋಲೆಯವರು ವಿಜ್ಞಾನ ಜಗತ್ತಿನಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವುದರ ಪ್ರತಿಪಾದಕರಾಗಿದ್ದರು. ಅವರ ಶೈಕ್ಷಣಿಕ ಪ್ರಯತ್ನಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.

Xನ ಪೋಸ್ಟ್ ನಲ್ಲಿ ಶ್ರೀ ಮೋದಿಯವರು:

“ರೋಹಿಣಿ ಗೋಡ್ಬೋಲೆ ಜಿ ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ. ಅವರು ಪ್ರವರ್ತಕ ವಿಜ್ಞಾನಿ ಮತ್ತು ನಾವೀನ್ಯಕಾರರಾಗಿದ್ದರು, ಅವರು ವಿಜ್ಞಾನ ಜಗತ್ತಿನಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವುದರ ಪ್ರತಿಪಾದಕರಾಗಿದ್ದರು. ಅವರ ಶೈಕ್ಷಣಿಕ ಪ್ರಯತ್ನಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲು ಸಮರ್ಥವಾಗಿವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ಬರೆದಿದ್ದಾರೆ.

*****