Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಮತಿ ಮುಕ್ತಾ ತಿಲಕ್ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ  


ಪುಣೆಯ ಮಾಜಿ ಮೇಯರ್ ಮತ್ತು ಮಹಾರಾಷ್ಟ್ರದ ಶಾಸಕಿ ಶ್ರೀಮತಿ ಮುಕ್ತಾ ತಿಲಕ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್‌ ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ;

“ಶ್ರೀಮತಿ ಮುಕ್ತಾ ತಿಲಕ್ ಜೀ ಅವರು ಶ್ರದ್ಧೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ್ದರು. ಸಾರ್ವಜನಿಕರ  ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುವ  ಮೂಲಕ ಜನಪ್ರಿಯತೆಯ ಛಾಪು ಮೂಡಿಸಿದ್ದಾರೆ ಮತ್ತು ಪುಣೆಯ ಮೇಯರ್ ಆಗಿ ಗಮನಾರ್ಹ ಅಧಿಕಾರಾವಧಿಯನ್ನು ಹೊಂದಿದ್ದರು. ಬಿಜೆಪಿಗೆ ಅವರ ಬದ್ಧತೆಯನ್ನು ಕಾರ್ಯಕರ್ತರು ಯಾವಾಗಲೂ ಗೌರವಿಸುತ್ತಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬಕ್ಕೆ  ಮತ್ತು ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ.”

***