ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜಪಾನಿನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಶ್ರೀಮತಿ ಅಬೆ ಅವರನ್ನು ಭೇಟಿ ಮಾಡಿದರು. ಈ ಭೇಟಿಯಲ್ಲಿ, ಶ್ರೀ ಮೋದಿಯವರು ದಿವಂಗತ ಪ್ರಧಾನಿ ಶಿಂಜೋ ಅಬೆ ಅವರೊಂದಿಗಿನ ತಮ್ಮ ಆಪ್ತ ವೈಯಕ್ತಿಕ ಸ್ನೇಹವನ್ನು ಪ್ರೀತಿಯಿಂದ ಸ್ಮರಿಸಿದರು. ಭಾರತ-ಜಪಾನ್ ಸಂಬಂಧಗಳ ಸಾಮರ್ಥ್ಯದ ಬಗ್ಗೆ ಅಬೆ ಸಾನ್ ಅವರ ಬಲವಾದ ನಂಬಿಕೆಯನ್ನು ಎತ್ತಿ ಹಿಡಿದಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತದೊಂದಿಗಿನ ಶ್ರೀಮತಿ ಅಬೆ ಅವರ ನಿರಂತರ ಒಡನಾಟಕ್ಕೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;
“ಇಂದು ಮಧ್ಯಾಹ್ನ ಶ್ರೀಮತಿ ಅಬೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರೊಂದಿಗಿನ ನನ್ನ ಆಪ್ತ ವೈಯಕ್ತಿಕ ಸ್ನೇಹವನ್ನು ಸ್ಮರಿಸುತ್ತೇನೆ. ಭಾರತ-ಜಪಾನ್ ಸಂಬಂಧಗಳ ಸಾಮರ್ಥ್ಯದ ಬಗ್ಗೆ ಅಬೆ ಸ್ಯಾನ್ ಅವರ ನಂಬಿಕೆ ನಮಗೆ ಶಾಶ್ವತ ಶಕ್ತಿಯ ಊರ್ಜಾ ಮೂಲವಾಗಿದೆ. ಭಾರತದೊಂದಿಗೆ ಶ್ರೀಮತಿ ಅಬೆ ಅವರ ನಿರಂತರ ಒಡನಾಟವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
*****
Pleased to meet Mrs. Abe this afternoon. Recalled my close personal friendship with former Prime Minister Shinzo Abe of Japan. Abe San’s belief in the potential of India-Japan relations will remain a source of enduring strength for us. Deeply appreciate Mrs. Abe’s continuing… pic.twitter.com/jXbqTworep
— Narendra Modi (@narendramodi) September 6, 2024