Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀನಗರದಲ್ಲಿ ಪ್ರಧಾನಿ: ಕಿಶನ್ ಗಂಗಾ ಜಲ ವಿದ್ಯುತ್ ಕೇಂದ್ರ ದೇಶಕ್ಕೆ ಸಮರ್ಪಣೆ

ಶ್ರೀನಗರದಲ್ಲಿ ಪ್ರಧಾನಿ: ಕಿಶನ್ ಗಂಗಾ ಜಲ ವಿದ್ಯುತ್ ಕೇಂದ್ರ ದೇಶಕ್ಕೆ ಸಮರ್ಪಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಶ್ರೀನಗರದಲ್ಲಿ ನಡೆದ ಸಮಾರಂಭದಲ್ಲಿ ಕಿಶನ್ ಗಂಗಾ ಜಲ ವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಶ್ರೀನಗರ ವರ್ತುಲ ರಸ್ತೆಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಸಂದರ್ಭದಲ್ಲಿ ತಾವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು.

ರಂಜಾನ್ ಮಾಸವು ಪ್ರವಾದಿ ಮೊಹಮ್ಮದ್ ಅವರ ಸಂದೇಶವನ್ನು ಸ್ಮರಿಸುವ ಸಮಯವಾಗಿದೆ ಎಂದರು.

330 ಮೆ.ವ್ಯಾ. ಕಿಶನ್ ಗಂಗಾ ಜಲ ವಿದ್ಯುತ್ ಯೋಜನೆಯು ರಾಜ್ಯದ ವಿದ್ಯುತ್ ಅಗತ್ಯವನ್ನು ಪೂರೈಸುವಲ್ಲಿ ಬಹು ದೂರ ಸಾಗಲಿದೆ ಎಂದರು.

ರಾಜ್ಯದ ಮೂರು ವಲಯಗಳಾದ ಕಾಶ್ಮೀರ, ಜಮ್ಮು ಮತ್ತು ಲಡಾಕ್ ನ ಸಮತೋಲಿತ ಅಭಿವೃದ್ಧಿಯ ಅಗತ್ಯವನ್ನು ಅವರು ಪ್ರತಿಪಾದಿಸಿದರು.

*****