Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶೌರ್ಯ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ಭೋಪಾಲ್ ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷ

ಶೌರ್ಯ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ಭೋಪಾಲ್ ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷ

ಶೌರ್ಯ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ಭೋಪಾಲ್ ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷ

ಶೌರ್ಯ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ಭೋಪಾಲ್ ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೋಪಾಲ್ ನಲ್ಲಿ ಶೌರ್ಯ ಸ್ಮಾರಕ ಉದ್ಘಾಟಿಸಿ, ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಾರ್ವಜನಿಕ ಸಭೆಯಲ್ಲಿ ಮಾಜಿ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಭಾರತೀಯ ಸೈನಿಕರು ಮಾನವತೆಯ ಸಂಕೇತ ಎಂದು ಪ್ರಧಾನಿ ಹೇಳಿದರು. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಭಾರತೀಯ ಸಶಸ್ತ್ರ ಪಡೆಯ ಯೋಧರು ಹೇಗೆ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆಎಂಬುದನ್ನು ಅವರು ಸ್ಮರಿಸಿದರು.

ಸನ್ನಡತೆ ಮತ್ತು ಶಿಸ್ತಿನಂಥ ಮಾನದಂಡದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ವಿಶ್ವದಲ್ಲಿಯೇ ಉತ್ತಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎಂದು ಅವರು ಹೇಳಿದರು. ವಿಶ್ವದಾದ್ಯಂತ ಶಾಂತಿ ಪಾಲನೆಯಲ್ಲಿ ಅತಿ ದೊಡ್ಡ ಕೊಡುಗೆದಾರನಾಗಿದೆ ಎಂದೂ ಅವರು ಹೇಳಿದರು. ಯೆಮನ್ ನಲ್ಲಿ ಇತ್ತೀಚೆಗೆ ನಡೆದ ಬಿಕ್ಕಟ್ಟಿನ ವೇಳೆ ಭಾರತೀಯ ಸಶಸ್ತ್ರ ಪಡೆಗಳು ಕೇವಲ ಭಾರತೀಯ ಪ್ರಜೆಗಳನ್ನಷ್ಟೇ ಅಲ್ಲ, ಇತರ ರಾಷ್ಟ್ರಗಳ ಪ್ರಜೆಗಳನ್ನೂ ತೆರವು ಮಾಡಿದರು ಎಂಬುದನ್ನು ನೆನಪಿಸಿಕೊಂಡರು.ಇತರ ರಾಷ್ಟ್ರಗಳ ಭೂಭಾಗದ ಮೇಲೆ ಭಾರತೀಯರು ಎಂದೂ ಆಸೆ ಪಟ್ಟವರಲ್ಲ ಎಂದ ಪ್ರಧಾನಮಂತ್ರಿ, ಆದರೆ ಮಾನವೀಯ ಮೌಲ್ಯಗಳನ್ನು ಉಳಿಸುವ ಸಮಯ ಬಂದಾಗ, ಭಾರತೀಯ ಸಶಸ್ತ್ರ ಪಡೆಗಳು ಸಂದರ್ಭಕ್ಕೆ ತಕ್ಕಂತೆ ವರ್ತಿಸುವಲ್ಲಿ ಎಂದೂ ಸೋತಿಲ್ಲ ಎಂದರು. ವಿಶ್ವಯುದ್ಧಗಳು ಎಂದೂ ಭಾರತದ ಯುದ್ಧವಾಗಿರಲಿಲ್ಲ, ಆದರೆ, ವಿದೇಶೀ ನೆಲದ ರಕ್ಷಣೆಗಾಗಿ ಹಲವಾರು ಭಾರತೀಯ ಯೋಧರು ಬಲಿದಾನ ಮಾಡಿದ್ದಾರೆ ಎಂದರು. ನಾವು ಭಾರತೀಯ ಯೋಧರ ಈ ಬಲಿದಾನವನ್ನು ಎಂದೂ ಮರೆಯಬಾರದು ಮತ್ತು ವಿಶ್ವ ಕೂಡ ಇದನ್ನು ಮರೆಯದಂತೆ ನಾವು ಖಾತ್ರಿ ಪಡಿಸಿಕೊಳ್ಳಬೇಕು ಎಂದರು. ಭಾರತೀಯ ಸಶಸ್ತ್ರ ಪಡೆಗಳ ಶಕ್ತಿ ನಮ್ಮ ಯೋಧರ ಸ್ಥೈರ್ಯದಲ್ಲಿದೆ. ಈ ಸ್ಥೈರ್ಯ 125 ಕೋಟಿ ಭಾರತೀಯರಿಂದ ಲಭಿಸುತ್ತದೆ ಎಂದರು. ಶಾಶ್ವತವಾದ ನಿಗಾ ಸ್ವಾತಂತ್ರ್ಯದ ಮೌಲ್ಯವಾಗಿದೆ ಎಂದ ಪ್ರಧಾನಿ, ದೇಶದ ಗಡಿಯನ್ನು ಕಾಯುತ್ತಿರುವ ಯೋಧರ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿ ಕವಿ ಮಖನ್ ಲಾಲ್ ಚತುರ್ವೇದಿ ಮತ್ತು ರಾಮ್ ಧಾರಿ ಸಿಂಗ್ ದಿನಕರ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತೀಯ ಸಶಸ್ತ್ರ ಪಡೆಗಳ ತ್ಯಾಗ ಮತ್ತು ವೈಭವದ ಪರಂಪರೆಯನ್ನು ಕೊಂಡಾಡಿದರು.

ಕೇಂದ್ರ ಸರ್ಕಾರವು ಸಮಾನ ಶ್ರೇಣಿ ಸಮಾನ ಪಿಂಚಣಿ ಭರವಸೆಯನ್ನು ಈಡೇರಿಸಿದೆ ಎಂದ ಪ್ರಧಾನಮಂತ್ರಿಯವರು, ಮಾಜಿ ಯೋಧರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಇತರ ಕ್ರಮಗಳನ್ನೂ ಉಲ್ಲೇಖಿಸಿದರು.

AKT/SH