Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶೌರ್ಯ ಪ್ರಶಸ್ತಿ ವಿಜೇತರಿಗೆ ಗೌರವ ಸಲ್ಲಿಸಲು ವೆಬ್ ಸೈಟ್ ಗೆ ಚಾಲನೆ ನೀಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಾತಂತ್ರ್ಯ ಬಂದ ದಿನದಿಂದ ಇಂದಿನವರೆಗೆ ಶೌರ್ಯ ಪ್ರಶಸ್ತಿ ಪಡೆದವರ ಗೌರವಾರ್ಥ ನೂತನ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿದರು.

ಸರಣಿ ಟ್ವೀಟ್ ನಲ್ಲಿ http://gallantryawards.gov.in/ ಅಂತರ್ಜಾಲ ತಾಣಕ್ಕೆ ಚಾಲನೆನೀಡಲಾಗಿದೆ ಎಂದು ಪ್ರಕಟಿಸಿರುವ ಪ್ರಧಾನಿ, ಈ ತಾಣವು ನಮ್ಮ ಶೌರ್ಯ ಪುರುಷರು ಮತ್ತು ಮಹಿಳೆಯರ, ನಾಗರಿಕರ ಮತ್ತು ಸೇನಾ ಸಿಬ್ಬಂದಿಯ ಶೌರ್ಯಗಾಥೆಗಳನ್ನು ಹೇಳುತ್ತದೆ ಎಂದು ತಿಳಿಸಿದ್ದಾರೆ.

“ಸ್ವಾತಂತ್ಯ್ರ ಬಂದ ದಿನದಿಂದಲೂ ಶೌರ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ನಮ್ಮ ನಾಯಕರ (ಹೀರೋ)ಗಳನ್ನು ಸ್ಮರಿಸಲು http://gallantryawards.gov.in/ ತಾಣಕ್ಕೆ ಚಾಲನೆ ನೀಡಲಾಗಿದೆ.

http://gallantryawards.gov.in/ ತಾಣವು ನಮ್ಮ ವೀರ ಪುರುಷರ ಮತ್ತು ಮಹಿಳೆಯರ, ನಾಗರಿಕರ ಮತ್ತು ಸೇನಾ ಸಿಬ್ಬಂದಿಯ ವೀರಗಾಥೆಯನ್ನು ಹೇಳುತ್ತದೆ ಮತ್ತು ಅದನ್ನು ಜತನವಾಗಿ ಕಾಪಾಡುತ್ತದೆ.

ಈ ತಾಣದಲ್ಲಿ ಇಲ್ಲದಿರುವ ಯಾವುದಾದರೂ ಮಾಹಿತಿ /ಫೊಟೋ ನಿಮ್ಮಲ್ಲಿ ಇದ್ದರೆ, ನೀವು ಅದನ್ನು ತಾಣದಲ್ಲಿ ಸೇರಿಸಬಹುದು, ನೀವು ಅದನ್ನು ತಾಣದ ಫೇಸ್ ಬುಕ್ ಸಂಪರ್ಕದಲ್ಲಿ ಹಂಚಿಕೊಳ್ಳಿ.”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT