ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನದಂದು ಎಲ್ಲ ಶಿಕ್ಷಕರ ಸಮರ್ಪಣಾ ಭಾವ ಮತ್ತು ಬದ್ಧತೆಗೆ ಗೌರವ ನಮನ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿಯವರು ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವನಮನ ಸಲ್ಲಿಸಿದ್ದಾರೆ. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಭಾರತಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.
“ಶಿಕ್ಷಕರ ದಿನದ ಶುಭಾಶಯಗಳು,! ದೇಶ ಕಟ್ಟುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ, ಎಲ್ಲ ಶಿಕ್ಷಕರ ಸಮರ್ಪಣಾಭಾವ ಮತ್ತು ಬದ್ಧತೆಗೆ ಭಾರತವು ವಂದನೆ ಸಲ್ಲಿಸುತ್ತದೆ.
ಹಲವರ ಮನಸ್ಸುಗಳಿಗೆ ಮೂರ್ತರೂಪ ನೀಡಿದ ಮತ್ತು ಭಾರತಕ್ಕೆ ಉತ್ತಮ ಸೇವೆ ಸಲ್ಲಿಸಿದ ತತ್ವಜ್ಞಾನಿ ಮತ್ತು ವಿದ್ವಾಂಸ ಹಾಗೂ ಗೌರವಾನ್ವಿತ ಶಿಕ್ಷಕ ಡಾ. ಎಸ್. ರಾಧಾಕೃಷ್ಣನ್ ಅವರಿಗೆ ವಂದನೆಗಳು.
ನಿಮ್ಮ ಶಿಕ್ಷಕರು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ? ನಿಮ್ಮ ಬದುಕಿನ ಘಟನೆ ಹಂಚಿಕೊಳ್ಳಿ ಮತ್ತು ಇತರ ಅನೇಕರು ಅವರ ಶಿಕ್ಷಕರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಓದಿ ” ಎಂದು ಪ್ರಧಾನಿ ತಿಳಿಸಿದ್ದಾರೆ.
AKT/AK
Happy Teachers Day! India salutes the dedication & commitment of all teachers, whose role in nation building is paramount.
— Narendra Modi (@narendramodi) September 5, 2016
Tributes to Dr. S Radhakrishnan, a scholar, statesman & a respected teacher who shaped many minds & served India. https://t.co/def2x8xwIR
— Narendra Modi (@narendramodi) September 5, 2016
How has your teacher influenced you? Share your anecdote & read what many others have written about their teachers. https://t.co/TYuxNNJfIf
— Narendra Modi (@narendramodi) September 5, 2016