ಘನತೆವೆತ್ತ ರಷ್ಯದ ಅಧ್ಯಕ್ಷರೇ, ಈ ಸದನ ಇಂದಿನ ನಮ್ಮ ಅಧ್ಯಕ್ಷರೇ, ಘನತೆವೆತ್ತರೇ, ನನ್ನ ಸ್ನೇಹಿತರೆ,
ಮೊದಲಿಗೆ ನಾನು ಎಸ್.ಸಿ.ಓ.ಗೆ ಸಮರ್ಥ ನಾಯಕತ್ವ ನೀಡಿದ ಮತ್ತು ಕೋವಿಡ್ 19 ಸಾಂಕ್ರಾಮಿಕ ಒಡ್ಡಿರುವ ಸವಾಲುಗಳ ನಡುವೆಯೂ ಈ ಶೃಂಗಸಭೆಯನ್ನು ಆಯೋಜಿಸಿರುವುದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ಈ ನೋವಿನ ಸನ್ನಿವೇಶದ ನಡುವೆಯೂ ನಾವು ಎಸ್.ಸಿ.ಓ. ಅಡಿಯಲ್ಲಿ ಏಕತೆ ಮತ್ತು ಸಹಕಾರದ ಕಾರ್ಯಕ್ರಮ ವಿಶಾಲ ಮತ್ತು ಮುನ್ನೋಟದ ಕಾರ್ಯಸೂಚಿಯನ್ನು ಮುಂದುವರಿಸಬಹುದು ಎಂಬುದು ನನಗೆ ಸಂತೋಷತಂದಿದೆ.
ಘನತೆವೆತ್ತರೆ,
ಭಾರತಕ್ಕೆ ಇದು ಎಸ್.ಸಿ.ಓನಲ್ಲಿ ಅತ್ಯಂತ ಮಹತ್ವದ ವರ್ಷವಾಗಿದೆ. ನಾವು ಮೊದಲ ಬಾರಿಗೆ “ಸರ್ಕಾರದ ಮುಖ್ಯಸ್ಥರ ಎಸ್.ಸಿ.ಒ ಮಂಡಳಿ” ಮಟ್ಟದ ಶೃಂಗಸಭೆಯನ್ನು ಕರೆಯಲಿದ್ದೇವೆ. ಈ ಸಭೆಗಾಗಿ ಆರ್ಥಿಕ ಸಹಕಾರಕ್ಕೆ ವಿಶೇಷ ಗಮನ ಹರಿಸಿ ವಿಶಾಲ ಕಾರ್ಯಸೂಚಿಯನ್ನು ರೂಪಿಸಲಾಗಿದೆ. ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ನಮ್ಮ ಶ್ರೀಮಂತ ಅನುಭವವನ್ನು ಹಂಚಿಕೊಳ್ಳಲು ನಾವೀನ್ಯತೆ ಮತ್ತು ನವೋದ್ಯಮಗಳ ಕುರಿತು ವಿಶೇಷ ಕಾರ್ಯ ಗುಂಪನ್ನು ರಚಿಸಲು ನಾವು ಪ್ರಸ್ತಾಪಿಸಿದ್ದೇವೆ. ಸಾಂಪ್ರದಾಯಿಕ ವೈದ್ಯ ಪದ್ಧತಿ ಕುರಿತಾದ ಕಾರ್ಯ ಗುಂಪನ್ನು ಸಹ ನಾವು ಪ್ರಸ್ತಾಪಿಸಿದ್ದೇವೆ, ಇದರಿಂದಾಗಿ ಸಾಂಪ್ರದಾಯಿಕ ಮತ್ತು ಪ್ರಾಚೀನ ವೈದ್ಯಕೀಯ ಜ್ಞಾನವು ಎಸ್.ಸಿ.ಒ ದೇಶಗಳಲ್ಲಿ ಪಸರಿಸಲಿದೆ ಮತ್ತು ಸಮಕಾಲೀನ ವೈದ್ಯಕೀಯ ಮುನ್ನಡೆಯು ಪರಸ್ಪರ ಪೂರಕವಾಗಿರುತ್ತದೆ.
ಘನತೆವೆತ್ತರೆ,
ಆರ್ಥಿಕ ಬಹುಪಕ್ಷೀಯತೆ ಮತ್ತು ರಾಷ್ಟ್ರೀಯ ಸಾಮರ್ಥ್ಯವರ್ಧನೆಯ ಸಂಯೋಜನೆಯೊಂದಿಗೆ, ಎಸ್.ಸಿ.ಒ ದೇಶಗಳು ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ನಷ್ಟದಿಂದ ಪಾರಾಗಬಹುದು ಎಂದು ಭಾರತ ದೃಢವಾಗಿ ನಂಬುತ್ತದೆ. ನಾವು ಸಾಂಕ್ರಾಮಿಕೋತ್ತರ ಜಗತ್ತಿನಲ್ಲಿ “ಸ್ವಾವಲಂಬಿ ಭಾರತ“ದ ದೂರದೃಷ್ಟಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ. “ಸ್ವಾವಲಂಬಿ ಭಾರತ” ಜಾಗತಿಕ ಆರ್ಥಿಕತೆಗೆ ಶಕ್ತಿ ಗುಣಕ ಎಂದು ಸಾಬೀತುಪಡಿಸುತ್ತದೆ ಮತ್ತು ಎಸ್.ಸಿ.ಒ ವಲಯದ ಆರ್ಥಿಕ ಪ್ರಗತಿಯನ್ನು ವೇಗಗೊಳಿಸುತ್ತದೆ ಎಂದು ನಾನು ನಂಬುತ್ತೇನೆ.
ಘನತೆವೆತ್ತರೆ,
ಭಾರತವು ಆಪ್ತವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವನ್ನು ಎಸ್.ಸಿ.ಓ. ರಾಷ್ಟ್ರಗಳೊಂದಿಗೆ ಹೊಂದಿದೆ. ನಮ್ಮ ಪೂರ್ವಜರು ತಮ್ಮ ಅವಿರತ ಪರಿಶ್ರಮದಿಂದ ಈ ಹಂಚಿಕೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್, ಚಬಹಾರ್ ಬಂದರು ಮತ್ತು ಅಶ್ ಗಬತ್ ಒಪ್ಪಂದದಂತಹ ಕ್ರಮಗಳು ಸಂಪರ್ಕದ ಬಗ್ಗೆ ಭಾರತದ ಬಲವಾದ ಬದ್ಧತೆಯನ್ನು ಬಿಂಬಿಸುತ್ತವೆ. ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಪ್ರಮುಖ ನೀತಿಯೊಂದಿಗೆ ಮುಂದುವರಿಯುವುದು ಅಗತ್ಯವೆಂದು ಭಾರತ ಭಾವಿಸುತ್ತದೆ.
ಘನತೆವೆತ್ತರೆ,
ವಿಶ್ವಸಂಸ್ಥೆಯು 75ನೇ ವರ್ಷ ಪೂರೈಸಿದೆ. ಹಲವು ಸಾಧನೆಗಳ ಹೊರತಾಗಿಯೂ ವಿಶ್ವಸಂಸ್ಥೆಯ ಮೂಲಭೂತ ಗುರಿ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ವಿಶ್ವ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕತೆ ಮತ್ತು ಸಾಮಾಜಿಕ ಸಂಕಷ್ಟದಿಂದ ಪರದಾಡುತ್ತಿದ್ದು, ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿರೀಕ್ಷೆ ಇದೆ.
ಇದನ್ನು ನಮ್ಮ ಗ್ರಂಥಗಳಲ್ಲಿ “ಪರಿವರ್ತನೆ ಸ್ತಿರಮಸ್ತಿ” – ಬದಲಾವಣೆ ಮಾತ್ರ ಶಾಶ್ವತ ಎಂದು ಹೇಳಲಾಗಿದೆ. 2021 ರಿಂದ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯನಾಗಿ ಪಾಲ್ಗೊಳ್ಳಲಿದೆ. ಜಾಗತಿಕ ಆಡಳಿತ ಪ್ರಕ್ರಿಯೆಯಲ್ಲಿ ಸಂಭವನೀಯ ಬದಲಾವಣೆಗಳನ್ನು ತರುವತ್ತ ನಮ್ಮ ಗಮನವಿರುತ್ತದೆ.
ಸುಧಾರಿತ ಬಹುಪಕ್ಷೀಯತೆ ಇಂದಿನ ಜಾಗತಿಕ ವಾಸ್ತವತೆಯಲ್ಲಿ ಪ್ರತಿಬಿಂಬಿತವಾಗಿದೆ ಮತ್ತು ಎಲ್ಲಾ ಬಾಧ್ಯಸ್ಥರ ನಿರೀಕ್ಷೆಗಳು, ಸಮಕಾಲೀನ ಸವಾಲುಗಳು ಮತ್ತು ಮಾನವ ಕಲ್ಯಾಣ ಮುಂತಾದ ವಿಷಯಗಳನ್ನು ಚರ್ಚಿಸಿ. ಈ ಪ್ರಯತ್ನದಲ್ಲಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳಿಂದ ಸಂಪೂರ್ಣ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ.
ಘನತೆವೆತ್ತರೇ,
(ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯ)
ನಾವೆಲ್ಲರೂ ಸಂತೋಷದಿಂದ ಮತ್ತು ರೋಗ ಮುಕ್ತರಾಗಿರೋಣ. ಈ ಶಾಂತಿ ಸ್ತೋತ್ರವು ಭಾರತದ ಇಡೀ ಮಾನವ ಕಲ್ಯಾಣಕ್ಕಾಗಿ ಇರುವ ನಂಬಿಕೆಯ ಸಂಕೇತವಾಗಿದೆ. ಅಭೂತಪೂರ್ವ ಸಾಂಕ್ರಾಮಿಕದ ಈ ನೋವಿನ ಸಮಯದಲ್ಲಿ, ಭಾರತದ ಔಷಧ ಉದ್ಯಮವು 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ಒದಗಿಸಿತು. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಿಸುವ ದೇಶವಾಗಿ, ಭಾರತ ತನ್ನ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಇಡೀ ಮಾನವ ಕುಲಕ್ಕೆ ಸಹಾಯ ಮಾಡುತ್ತದೆ.
ಘನತೆವೆತ್ತರೇ,
ಭಾರತ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ದೃಢವಾಗಿ ನಂಬುತ್ತದೆ. ಮತ್ತು ನಾವು ಯಾವಾಗಲೂ ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ದ್ರವ್ಯ ಮತ್ತು ಹಣ ವರ್ಗಾವಣೆಗೆ ವಿರುದ್ಧ ದ್ವನಿ ಎತ್ತಿದ್ದೇವೆ. ಎಸ್.ಸಿ.ಒ ಸನ್ನದಿನಲ್ಲಿ ತಿಳಿಸಿರುವ ಎಸ್.ಸಿ.ಒ ತತ್ವಗಳನ್ನು ಅನುಸರಿಸುವ ಬದ್ಧತೆಯನ್ನು ಭಾರತ ದೃಢವಾಗಿ ಹೊಂದಿದೆ.
ಆದಾಗ್ಯೂ, ಎಸ್.ಸಿ.ಓ. ಕಾರ್ಯಕ್ರಮ ಪಟ್ಟಿಯಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ತರುವ ಪ್ರಯತ್ನ ಪದೇ ಪದೇ ಆಗುತ್ತಿರುವುದು ದುರ್ದೈವ, ಇದು ಎಸ್.ಸಿ.ಓ. ಸನ್ನದು ಮತ್ತು ಶಾಂಘೈ ಲೇಖದ ಉಲ್ಲಂಘಟನೆಯೂ ಆಗುತ್ತದೆ. ಇಂಥ ಪ್ರಯತ್ನಗಳು ಎಸ್.ಸಿ.ಓ. ವಿವರಿಸುವ ಒಮ್ಮತ ಮತ್ತು ಸಹಕಾರದ ಸ್ಫೂರ್ತಿಗೆ ತದ್ವಿರುದ್ಧವಾಗಿವೆ.
ಘನತೆವೆತ್ತರೇ,
ಎಸ್.ಸಿ.ಒ.ದ 20ನೇ ವಾರ್ಷಿಕೋತ್ಸವವನ್ನು 2021ರಲ್ಲಿ “ಎಸ್.ಸಿ.ಒ ಸಂಸ್ಕೃತಿ ವರ್ಷ” ಎಂದು ಆಚರಿಸಲು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಭಾರತೀಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಈ ವರ್ಷ ನಮ್ಮ ಹಂಚಿಕೆಯ ಬೌದ್ಧ ಪರಂಪರೆಯ ಬಗ್ಗೆ ಮೊದಲ ಎಸ್.ಸಿ.ಒ ಪ್ರದರ್ಶನವನ್ನು ಆಯೋಜಿಸುವ ಪ್ರಕ್ರಿಯೆಯಲ್ಲಿದೆ. ಭಾರತೀಯ ಸಾಹಿತ್ಯ ಅಕಾಡೆಮಿ ರಷ್ಯಾದ ಮತ್ತು ಚೀನೀ ಭಾಷೆಗಳಲ್ಲಿ ಹತ್ತು ಭಾರತೀಯ ಸಾಹಿತ್ಯ ಕೃತಿಗಳ ಅನುವಾದವನ್ನು ಪೂರ್ಣಗೊಳಿಸಿದೆ.
ಮುಂದಿನ ವರ್ಷ ಭಾರತ ಎಸ್.ಸಿ.ಓ. ಆಹಾರ ಉತ್ಸವವನ್ನು ಸಾಂಕ್ರಾಮಿಕ ಮುಕ್ತ ವಾತಾವರಣದಲ್ಲಿ ಆಯೋಜಿಸುವ ವಿಶ್ವಾಸ ನನಗಿದೆ. ಎಲ್ಲ ಎಸ್.ಸಿ.ಓ. ರಾಷ್ಟ್ರಗಳ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಇತ್ತೀಚೆಗೆ ಬೀಜಿಂಗ್ ನ ಎಸ್.ಸಿ.ಓ.ದ ಸಚಿವಾಲಯದದೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂಬುದು ಸಂತಸದ ವಿಷಯವಾಗಿದೆ.
ಘನತೆವೆತ್ತರೇ,
ನಾನು ಮತ್ತೊಮ್ಮೆ ಅಧ್ಯಕ್ಷ ಪುಟಿನ್ ಅವರಿಗೆ ಅವರ ಉತ್ಕೃಷ್ಟ ಮತ್ತು ಯಶಸ್ವೀ ನಾಯಕತ್ವಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಮುಂದಿನ ವರ್ಷದ ಎಸ್.ಸಿ. ಒ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಕ್ಕಾಗಿ ತಜಕಿ ಅಧ್ಯಕ್ಷ ಎಮೋಮಾಲಿ ರೆಹಮಾನ್ ರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ.
ತಜಕಿಸ್ತಾನದ ಅಧ್ಯಕ್ಷತೆಯ ಯಶಸ್ಸಿಗೆ ಭಾರತದ ಸಂಪೂರ್ಣ ಸಹಕಾರದ ಭರವಸೆಯನ್ನು ನಾನು ನೀಡುತ್ತೇನೆ.
ತುಂಬಾ ಧನ್ಯವಾದಗಳು.
***
United Nations ने अपने 75 years पूरे किए हैं।
— PMO India (@PMOIndia) November 10, 2020
लेकिन अनेक सफलताओं के बाद भी संयुक्त राष्ट्र का मूल लक्ष्य अभी अधूरा है।
महामारी की आर्थिक और सामाजिक पीड़ा से जूझ रहे विश्व की अपेक्षा है कि UN की व्यवस्था में आमूलचूल परिवर्तन आए: PM
एक ‘reformed multilateralism" जो आज की वैश्विक वास्तविकताओं को दर्शाए, जो सभी stakeholders की अपेक्षाओं, समकालीन चुनौतियों, और मानव कल्याण जैसे विषयों पर चर्चा करे।
— PMO India (@PMOIndia) November 10, 2020
इस प्रयास में हमें SCO सदस्य राष्ट्रों का पूर्ण समर्थन मिलने की अपेक्षा है: PM
अभूतपूर्व महामारी के इस अत्यंत कठिन समय में भारत के फार्मा उद्योग ने 150 से अधिक देशों को आवश्यक दवाएं भेजी हैं।
— PMO India (@PMOIndia) November 10, 2020
दुनिया के सबसे बड़े वैक्सीन उत्पादक देश के रूप में भारत अपनी वैक्सीन उत्पादन और वितरण क्षमता का उपयोग इस संकट से लड़ने में पूरी मानवता की मदद करने के लिए करेगा: PM
भारत का शांति, सुरक्षा और समृद्धि पर दृढ़ विश्वास है।
— PMO India (@PMOIndia) November 10, 2020
और हमने हमेशा आतंकवाद, अवैध हथियारों की तस्करी, ड्रग्स और मनी लॉन्डरिंग के विरोध में आवाज उठाई है।
भारत SCO Charter में निर्धारित सिद्धांतों के अनुसार SCO के तहत काम करने की अपनी प्रतिबद्धता में दृढ़ रहा है: PM
परन्तु, यह दुर्भाग्यपूर्ण है कि SCO agenda में बार-बार अनावश्यक रूप से द्विपक्षीय मुद्दों को लाने के प्रयास हो रहे हैं, जो SCO Charter और Shanghai Spirit का उल्लंघन करते हैं।
— PMO India (@PMOIndia) November 10, 2020
इस तरह के प्रयास SCO को परिभाषित करने वाली सर्वसम्मति और सहयोग की भावना के विपरीत हैं: PM