Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದಂದು ಪ್ರಧಾನಮಂತ್ರಿಯವರು ಅವರನ್ನು ಸ್ಮರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು. ಶ್ರೀ ಮೋದಿ ಅವರು ಶಹೀದ್ ಭಗತ್ ಸಿಂಗ್  ಬಗ್ಗೆ ಅವರ ಅಭಿಪ್ರಾಯಗಳ  ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಸಾಮಾಜಿಕ ಜಾಲತಾಣ ಎಕ್ಸ್  ನಲ್ಲಿ  ಹೀಗೆ ಬರೆದಿದ್ದಾರೆ:

“ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇನೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ತ್ಯಾಗ ಮತ್ತು ಅವರ ಅಚಲ ಬದ್ಧತೆಯು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ.  ಧೈರ್ಯದ ದಾರಿದೀಪ, ಅವರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ನಿರಂತರ ಹೋರಾಟದ ಸಂಕೇತವಾಗಿ ಶಾಶ್ವತವಾಗಿ ಇರುತ್ತಾರೆ.

********