ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ಪ್ರಧಾನಮಂತ್ರಿ ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರೊಂದಿಗೆ ಇಂದು ವ್ಯಾಟ್ ಫೋ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ವಾಟ್ ಫ್ರಾ ಚೆಟುಫೋನ್ ವಿಮನ್ ಮಂಗ್ಖಲರಾಮ್ ರಾಜ್ವರಮಹಾವಿಹಾನ್ ಗೆ ಭೇಟಿ ನೀಡಿದರು.
ವಿಶ್ರಾಂತಿ ಭಂಗಿಯಲ್ಲಿರುವ ಬುದ್ಧನ ವಿಗ್ರಹಕ್ಕೆ ಪ್ರಧಾನಮಂತ್ರಿಯವರು ನಮನ ಸಲ್ಲಿಸಿದರು ಮತ್ತು ಹಿರಿಯ ಬೌದ್ಧ ಭಿಕ್ಕುಗಳಿಗೆ ‘ಸಂಘದಾನ’ ಅರ್ಪಿಸಿದರು. ಪ್ರಧಾನಮಂತ್ರಿಯವರು ಅಶೋಕನ ಸಿಂಹ ಲಾಂಛನ (ಲಯನ್ ಕ್ಯಾಪಿಟೋಲ್ ಆಫ್ ಅಶೋಕ) ಪ್ರತಿಕೃತಿಯನ್ನು ವಿಶ್ರಾಂತ ಸ್ಥಿತಿಯ / ಒರಗಿಕೊಂಡಿರುವ ಬುದ್ಧನ ದೇಗುಲಕ್ಕೆ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಉಭಯ ದೇಶಗಳ ನಡುವಿನ ಸದೃಢ ಮತ್ತು ಉತ್ಸಾಹಭರಿತ ನಾಗರಿಕ ಸಂಬಂಧಗಳನ್ನು ಸ್ಮರಿಸಿದರು.
*****
Today, I had the honour of visiting the historic Wat Phra Chetuphon Wimonmangkalaram Ratchaworamahawihan Or Wat Pho in Bangkok. I thank Prime Minister Paetongtarn Shinawatra for the special gesture of coming to the Temple with me. One of Thailand’s most revered spiritual… pic.twitter.com/5xIDGPmcrX
— Narendra Modi (@narendramodi) April 4, 2025