ಜೆಕ್ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಆಂಡ್ರೆಜ್ ಬಾಬಿಸ್ ಅವರು 2019ರ ಜನವರಿ 17ರಿಂದ 19ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಅವರೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಶ್ರೀಮತಿ ಮಾರ್ಟಾ ನೊವಾಕೋವಾ ಮತ್ತು ದೊಡ್ಡ ಸಂಖ್ಯೆಯ ವಾಣಿಜ್ಯ ನಿಯೋಗವೂ ಆಗಮಿಸಿದೆ. ಪ್ರಧಾನಮಂತ್ರಿ ಬಾಬಿಸ್ ಅವರು ವೈಬ್ರೆಂಟ್ ಗುಜರಾತ್ ಶೃಂಗಸಭೆ 2019ರಲ್ಲಿ ಪಾಲುದಾರ ರಾಷ್ಟ್ರವಾಗಿರುವ ಜೆಕ್ ಗಣರಾಜ್ಯದ ನಿಯೋಗದ ನೇತೃತ್ವ ವಹಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ಬಾಬಿಸ್ ಜನವರಿ 18ರಂದು ಶೃಂಗದ ವೇಳೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ಮಾತುಕತೆಯ ವೇಳೆ ಮಹತ್ವದ ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳು ಸೇರಿದಂತೆ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆ ಚರ್ಚಿಸಲಾಯಿತು.
ಪ್ರಧಾನಮಂತ್ರಿ ಮೋದಿ ಅವರ ದೂರದರ್ಶಿತ್ವದ ನಾಯಕತ್ವನ್ನು ಶ್ಲಾಘಿಸಿದ ಜೆಕ್ ಪ್ರಧಾನಮಂತ್ರಿಗಳು ಭಾರತದ ತ್ವರಿತ ಆರ್ಥಿಕ ಪ್ರಗತಿ ಮತ್ತು ದ್ವಿಪಕ್ಷೀಯ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯ ಹೆಚ್ಚಳಕ್ಕಾಗಿ ಬೃಹತ್ ಅವಕಾಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಭಾರತದ ರಾಷ್ಟ್ರಪತಿಯವರು ಜೆಕ್ ಗಣರಾಜ್ಯಕ್ಕೆ ಭೇಟಿ ನೀಡಿದ್ದನ್ನು ಮತ್ತು ಆಗ ದ್ವಿಪಕ್ಷೀಯ ಸಹಕಾರ ಕುರಿತಂತೆ ಹಲವು ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಿದ್ದನ್ನು ಪ್ರಧಾನಮಂತ್ರಿ ಬಾಬಿಸ್ ಸ್ಮರಿಸಿದರು.
ಜೆಕ್ ಗಣರಾಜ್ಯ ಬೃಹತ್ ಯಂತ್ರೋಪಕರಣ ಮತ್ತು ಸಂಸ್ಕರಣಾ ಎಂಜಿನಿಯರಿಂಗ್ ನಲ್ಲಿ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ ಹೊಂದಿದೆ. ಪ್ರಧಾನಮಂತ್ರಿ ಮೋದಿ ಅವರು ಭಾರತದಲ್ಲಿ ಅದರಲ್ಲೂ ರಕ್ಷಣೆ, ವಾಹನ ಮತ್ತು ರೈಲ್ವೆ ವಲಯದಲ್ಲಿ ಭಾರತದಲ್ಲಿಯೇ ಉತ್ಪಾದನೆ ಮಾಡಲು ನೀಡುತ್ತಿರುವ ಬೃಹತ್ ಅವಕಾಶಗಳ ಲಾಭ ಪಡೆಯುವಂತೆ ಜೆಕ್ ಕಂಪನಿಗಳಿಗೆ ಆಹ್ವಾನ ನೀಡಿದರು.
ಜೆಕ್ ಪ್ರಧಾನಮಂತ್ರಿಯವರು ಸ್ವಯಂ ಪ್ರಧಾನಮಂತ್ರಿಯವರ ನೇತೃತ್ವದ ಮತ್ತು ಉನ್ನತ ಗೌರವದ ಹಲವು ಅಂತಾರಾಷ್ಟ್ರೀಯ ಸಂಶೋಧಕರಿಗೆ ಪ್ರಾಯೋಜಕತ್ವ ನೀಡುತ್ತಿರುವ ಪ್ರತಿಷ್ಠಿತ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಗೆ ಭಾರತೀಯ ವಿಜ್ಞಾನಿಯೊಬ್ಬರನ್ನು ನಾಮಾಂಕನ ಮಾಡುವಂತೆ ಆಮಂತ್ರಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಸಾಂಪ್ರದಾಯಿಕವಾದ ಆಪ್ತ ದ್ವಿಪಕ್ಷೀಯ ಬಾಂಧವ್ಯವನ್ನು ಶ್ಲಾಘಿಸಿದರು ಮತ್ತು ನಮ್ಮ ಬಾಂಧವ್ಯವನ್ನು ಉನ್ನತ ಎತ್ತರಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದರು.
ಈ ಭೇಟಿಯ ವೇಳೆ ಪ್ರಧಾನಮಂತ್ರಿ ಬಾಬಿಸ್ ಅವರು ಜನವರಿ 19ರಂದು ನವ ದೆಹಲಿಯಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲಿದ್ದಾರೆ. ಕೆಲವು ಜೆಕ್ ಕಂಪನಿಗಳಿಗೆ ಭೇಟಿ ನೀಡಲು ಮತ್ತು ಪುಣೆಯ ಸಿಂಬಿಯೋಸಿಸ್ ವಿಶ್ವವಿದ್ಯಾಲಯದಲ್ಲಿ ಐರೋಪ್ಯ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಲು ಅವರು ಪುಣೆಗೆ ಹೋಗುವ ಕಾರ್ಯಕ್ರಮವೂ ಇದೆ.
***
Mr. Andrej Babiš, the Prime Minister of the Czech Republic and I held wide-ranging talks in Gandhinagar. His presence at the Vibrant Gujarat Summit is a great gesture. We discussed bilateral cooperation in defence, transportation and manufacturing. pic.twitter.com/ttVYVcc5Ca
— Narendra Modi (@narendramodi) January 18, 2019