Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವುಹಾನ್ ರಕ್ಷಣಾ ಕಾರ್ಯಾಚರಣೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ವುಹಾನ್‌ನಲ್ಲಿ ಇಕ್ಕಟ್ಟಿನಲ್ಲಿದ್ದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದ ಏರ್ ಇಂಡಿಯಾ ಮತ್ತು ಕರ್ತವ್ಯ ಬದ್ಧತೆ ಪ್ರದರ್ಶಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಸ್ಥಳಾಂತರ ಕಾರ್ಯಾಚರಣೆ ತಂಡದ ಸದಸ್ಯರಿಗೆ ಪ್ರಧಾನಿ ಮೆಚ್ಚುಗೆಯ ಪತ್ರ ಬರೆದಿದ್ದಾರೆ. ಈ ಪತ್ರವನ್ನು ರಾಜ್ಯ ನಾಗರಿಕ ವಿಮಾನಯಾನ ಸಚಿವರು ಸಿಬ್ಬಂದಿಗೆ ಹಸ್ತಾಂತರಿಸಲಿದ್ದಾರೆ.

ವ್ಯಾಪಕವಾಗಿ ಹರಡುತ್ತಿರುವ ನಾವೆಲ್ ಕರೊನಾ ವೈರಸ್ ಫ್ಲೂನ ಕೇಂದ್ರ ಬಿಂದುವಾಗಿರುವ ವುಹಾನ್ ನಗರದಿಂದ, ಏರ್ ಇಂಡಿಯಾ ತುರ್ತು ಸ್ಥಳಾಂತರ ಕಾರ್ಯಾಚರಣೆಯನ್ನು ನಡೆಸಿತು. ಈ ಪ್ರದೇಶದಲ್ಲಿರುವ ಗಂಭೀರ ಪರಿಸ್ಥಿತಿಯ ಅರಿವಿದ್ದರೂ ಸಹ, ಭಾರತೀಯರ ರಕ್ಷಣೆಗಾಗಿ ಜನವರಿ 31, 2020 ಹಾಗು ಫೆಬ್ರವರಿ 1, 2020 ರಂದು ಏರ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯದ ತಂಡವನ್ನು ಎರಡು ಬಿ–747 ವಿಮಾನದಲ್ಲಿ ಕಳುಹಿಸಿಕೊಡಲಾಗಿತ್ತು, ತಂಡಗಳು ಮರುದಿನ ಹಿಂದಿರುಗಿದವು.