Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವೀರ ಬಾಲ ದಿನದ ಅಂಗವಾಗಿ ಸಾಹಿಬ್‌ಜಾಡೆಸ್‌ನ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀರ ಬಾಲ ದಿನದ ಅಂಗವಾಗಿ ಇಂದು ಸಾಹಿಬ್‌ಜಾಡೆಸ್‌ನ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ್ದಾರೆ. ಅವರ ತ್ಯಾಗವು ಶೌರ್ಯ ಮತ್ತು ಮೌಲ್ಯಗಳಿಗೆ ಬದ್ಧತೆಯ ಉಜ್ವಲ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತಾ ಗುಜ್ರಿ ಜಿ ಮತ್ತು ಶ್ರೀ ಗುರು ಗೋವಿಂದ್ ಸಿಂಗ್ ಅವರ ಶೌರ್ಯವನ್ನೂ ಸಹ ಸ್ಮರಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ X ಸಾಮಾಜಿಕ ಮಾಧ್ಯಮ  ಜಾಲತಾಣದಲ್ಲಿ ಹೀಗೆ ಹೇಳಿದ್ದಾರೆ.

“ಇಂದು ವೀರ ಬಾಲ ದಿನ, ನಾವು ಸಾಹಿಬ್ ಜಾಡೇಸ್ ರ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಅವರು ತಮ್ಮ ನಂಬಿಕೆ ಮತ್ತು ತತ್ವಗಳಲ್ಲಿ ದೃಢವಾಗಿ ನಿಂತು, ತಮ್ಮ ಧೈರ್ಯದಿಂದ ಪೀಳಿಗೆಗೆ ಸ್ಫೂರ್ತಿ ತುಂಬಿದವರು. ಒಬ್ಬರ ಮೌಲ್ಯಗಳಿಗೆ ಅವರ ತ್ಯಾಗವು ಶೌರ್ಯ ಮತ್ತು ಬದ್ಧತೆಯ ಉಜ್ವಲ ಉದಾಹರಣೆಯಾಗಿದೆ. ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಮಾತಾ ಗುಜ್ರಿ ಮತ್ತು ಶ್ರೀ ಗುರು ಗೋವಿಂದ್ ಸಿಂಗ್ ಅವರ ಧೈರ್ಯವನ್ನು ಸದಾ ನೆನಪಿಸಿಕೊಳ್ಳುತ್ತೇವೆ “.

 

 

*****