Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ವನ್ಯಜೀವಿ ದಿನದ ನಿಮಿತ್ತ ನಮ್ಮ ಭೂಗ್ರಹದ ಅನನ್ಯ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ


ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಭೂಮಿಯ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆಯನ್ನು ಇಂದು ಪುನರುಚ್ಚರಿಸಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:

ಇಂದು, #WorldWildlifeDay, ನಮ್ಮ ಭೂಗ್ರಹದ ಅನನ್ಯ ಜೀವವೈವಿಧ್ಯತೆಯನ್ನು ಕಾಪಾಡಲು ಮತ್ತು ಸಂರಕ್ಷಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಪ್ರತಿಯೊಂದು ಜೀವಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ – ಮುಂದಿನ ಪೀಳಿಗೆಗೆ ಅವುಗಳ ಭವಿಷ್ಯದ ಹಿತ ಕಾಪಾಡೋಣ! 

ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ಪೋಷಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಗಳ ಬಗ್ಗೆ ನಮಗೆ ಹೆಮ್ಮೆ ಇದೆ.”

#WorldWildlifeDay

 

 

*****