Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ವನ್ಯಜೀವಿ ದಿನದಂದು ವನ್ಯಜೀವಿ ಪ್ರೇಮಿಗಳಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ


ವಿಶ್ವ ವನ್ಯಜೀವಿ ದಿನವಾದ ಇಂದು ವನ್ಯಜೀವಿ ಉತ್ಸಾಹಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.

ನಮ್ಮ ಗ್ರಹದಲ್ಲಿನ ವಿಸ್ಮಯಕರ  ವೈವಿಧ್ಯತೆಯನ್ನು ಆಚರಿಸುತ್ತಾ ಮತ್ತು ಅದನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ ಇಂದು ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

“ವಿಶ್ವ ವನ್ಯಜೀವಿ ದಿನದಂದು ಎಲ್ಲಾ ವನ್ಯಜೀವಿ ಉತ್ಸಾಹಿಗಳಿಗೆ ಶುಭಾಶಯಗಳು. ಇದು ನಮ್ಮ ಗ್ರಹದಲ್ಲಿನ ಜೀವನದ ಅಮೂಲ್ಯ, ಅತುಲ್ಯ, ಹಾಗೂ ಅನನ್ಯ ಪ್ರಕೃತಿ ವೈವಿಧ್ಯತೆಯನ್ನು ಆಚರಿಸುವ ಮತ್ತು ಅದನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ. ವನ್ಯಜೀವಿ ನಿಟ್ಟಿನಲ್ಲಿ ಸುಸ್ಥಿರ ಅಭ್ಯಾಸಗಳಲ್ಲಿ ಮುಂಚೂಣಿಯಲ್ಲಿರುವ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳು ಮತ್ತು ಬೆಂಬಲಿಸುವ ಎಲ್ಲರನ್ನು ನಾನು ಪ್ರಶಂಸಿಸುತ್ತೇನೆ.”

**