ವಿಶ್ವ ಬ್ಯಾಂಕ್ ಅಧ್ಯಕ್ಷ ಡಾ. ಜಿಮ್ ಯಂಗ್ ಕಿಮ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಭೇಟಿಯ ವೇಳೆ, ವಿಶ್ವ ಬ್ಯಾಂಕ್ ಭಾರತಕ್ಕೆ ಬೆಂಬಲ ಮುಂದುವರಿಸಿರುವ ಬಗ್ಗೆ, ಅದರಲ್ಲೂ ಸ್ಮಾರ್ಟ್ ಸಿಟಿಗಳು, ಗಂಗಾ ಪುನಶ್ಚೇತನ, ಕೌಶಲ್ಯ ಅಭಿವೃದ್ಧಿ, ಸ್ವಚ್ಛ ಭಾರತ ಮತ್ತು ಎಲ್ಲರಿಗೂ ವಿದ್ಯುತ್ ನಂಥ ಆದ್ಯತೆ ವಲಯಗಳಿಗೆ ಬೆಂಬಲ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಡಾ. ಕಿಮ್ ಅವರು ಈ ಕಾರ್ಯಕ್ರಮಗಳಲ್ಲಿ ಮಹತ್ವದ ಗುರಿ ಸಾಧನೆಯಲ್ಲಿನ ಪ್ರಗತಿಯ ಬಗ್ಗೆ ಸಂತುಷ್ಟರಾಗಿರುವುದಾಗಿ ತಿಳಿಸಿದರು.
ಪ್ರಧಾನಮಂತ್ರಿಯವರು ಸುಸ್ಥಿರವಾದ ಪರಿಸರಾತ್ಮಕ ಹಾದಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಭಾರತದಂಥ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆ ಕುರಿತಂತೆ ಸಾಕಷ್ಟು ಆರ್ಥಿಕ ನೆರವು ನೀಡುವ ಅಗತ್ಯವನ್ನು ಪ್ರತಿಪಾದಿಸಿದರು. ಡಾ. ಕಿಮ್ ಅವರು, ವಿಶ್ವ ಬ್ಯಾಂಕ್ ಸಕಾರಾತ್ಮಕವಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ವಿಶೇಷವಾಗಿ ಸರಂಜಾಮು ಸಾಗಣೆ ಕ್ಷೇತ್ರ ಸರಿದಂತೆ ಸುಲಭವಾಗಿ ವ್ಯಾಪಾರ ಮಾಡುವ ನಿಟ್ಟಿನಲ್ಲಿನ ಸುಧಾರಣೆಯ ತ್ವರಿತ ಪ್ರಗತಿಗೆ ಡಾ.ಕಿಮ್ ಅವರು ಭಾರತವನ್ನು ಪ್ರಶಂಸಿಸಿದರು.
ಪ್ರಧಾನಮಂತ್ರಿಯವರು ಮತ್ತು ಡಾ. ಕಿಮ್ ವಿಸ್ತೃತ ಶ್ರೇಣಿಯ ವಿಚಾರಗಳ ಬಗ್ಗೆ ಹಾಗೂ ಸಹಕಾರದ ಮಾರ್ಗಗಳ ಬಗ್ಗೆ ಚರ್ಚಿಸಿದರು.
Met @WorldBank President @JimYongKim & discussed ways to deepen India’s engagement with the World Bank. https://t.co/5yfW1e8BZK
— Narendra Modi (@narendramodi) June 30, 2016