Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಬಾನುಲಿ ದಿನದ ಅಂಗವಾಗಿ ಸರ್ವರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ


ವಿಶ್ವ ಬಾನುಲಿ ದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಈ ತಿಂಗಳ 23ರಂದು ನಿಗದಿಯಾಗಿರುವ ಮಾಸಿಕ ಕಾರ್ಯಕ್ರಮ “ಮನ್ ಕಿ ಬಾತ್‌”ಗಾಗಿ  ಜನರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. 

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ವಿಶ್ವ ಬಾನುಲಿ ದಿನದ ಶುಭಾಶಯಗಳು!

ಮಾಹಿತಿ ಒದಗಿಸುತ್ತಾ, ಸ್ಫೂರ್ತಿಯ ಸೆಲೆಯಾಗಿ ಮತ್ತು ಜನರನ್ನು ಸಂಪರ್ಕಿಸುತ್ತಾ ರೇಡಿಯೋ ಹಲವಾರು ಜನರಿಗೆ ಸಮಯಾತೀತ ಜೀವನಮಾರ್ಗವಾಗಿದೆ. ಸುದ್ದಿ ಮತ್ತು ಸಂಸ್ಕೃತಿಯಿಂದ ಸಂಗೀತ ಮತ್ತು ಕಥಾ ನಿರೂಪಣೆಯವರೆಗೆ, ಇದು ಸೃಜನಶೀಲತೆಯನ್ನು ಸಂಭ್ರಮಿಸುವ ಪ್ರಬಲ ಮಾಧ್ಯಮವಾಗಿದೆ.  

ಬಾನುಲಿ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ.  ಈ ತಿಂಗಳ 23ರ ಮಾಸಿಕ #MannKiBaat ಗಾಗಿ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

https://www.mygov.in/group-issue/inviting-ideas-mann-ki-baat-prime-minister-narendra-modi-23rd-february-2025

 

 

*****