Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಪ್ರವಾಸೋದ್ಯಮ ದಿನದಂದು ಅದ್ಭುತವಾದ ಭಾರತದ ಸೌಂದರ್ಯವನ್ನು ಶೋಧಿಸಲು ಜನತೆಗೆ ಪ್ರಧಾನಿ ಆಹ್ವಾನ


ವಿಶ್ವಾದ್ಯಂತ ಇರುವ ಜನತೆ ಭಾರತಕ್ಕೆ ಆಗಮಿಸಿ, ಅದ್ಭುತವಾದ ಸೌಂದರ್ಯವನ್ನು ಸಂಶೋಧಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತದಾದ್ಯಂತ ಸಂಚರಿಸಿ ವೈವಿಧ್ಯತೆಯನ್ನು ಹುಡುಕಲು ಅವರು ಯುವಜನರಿಗೆ ಮನವಿ ಮಾಡಿದ್ದಾರೆ.

” ವಿಶ್ವ ಪ್ರವಾಸೋದ್ಯಮ ದಿನದಂದು ನಾನು ಜಗತ್ತಿನಾದ್ಯಂತ ಇರುವ ಜನತೆಗೆ ಭಾರತಕ್ಕೆ ಆಗಮಿಸಿ, ಅದ್ಭುತ ಭಾರತದ ಸೌಂದರ್ಯ ಶೋಧಿಸಲು ಮತ್ತು ನಮ್ಮ ಜನರ ಆತಿಥ್ಯವನ್ನು ಸ್ವೀಕರಿಸಲು ಆಹ್ವಾನಿಸುತ್ತೇನೆ.

ನಾನು ವಿಶೇಷವಾಗಿ ನಮ್ಮ ಯುವ ಸ್ನೇಹಿತರಿಗೆ ಭಾರತದಾದ್ಯಂತ ಸಂಚರಿಸಿ ಮತ್ತು ದೇಶದಲ್ಲಿನ ಸಂಚಲನಶೀಲವಾದ ವೈವಿಧ್ಯತೆಯನ್ನು ಖುದ್ದು ನೋಡಲು ಮನವಿ ಮಾಡುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.

ಕಳೆದ ಭಾನುವಾರ ಮನ್ ಕಿ ಬಾತ್ ನ 36ನೇ ಕಾರ್ಯಕ್ರಮದಲ್ಲಿ ತಾವು ಪ್ರವಾಸೋದ್ಯಮದ ಬಗ್ಗೆ ಆಡಿದ ಮಾತುಗಳ ಕ್ಲಿಪ್ ಅನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.: https://soundcloud.com/narendramodi/unity-in-diversity-is-indias-speciality