Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಜಲ ದಿನದಂದು ಪ್ರತಿ ಹನಿ ನೀರೂ ಉಳಿಸುವ ಸಂಕಲ್ಪ ಮಾಡುವಂತೆ ಜನತೆಗೆ ಪ್ರಧಾನಮಂತ್ರಿ ಮನವಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ವಿಶ್ವ ಜಲ ದಿನದಂದು ಪ್ರತಿ ಹನಿ ನೀರೂ ಉಳಿಸುವ ಸಂಕಲ್ಪ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

“ವಿಶ್ವ ಜಲ ದಿನದಂದು ನಾವೆಲ್ಲರೂ ಪ್ರತಿ ಹನಿ ನೀರೂ ಉಳಿಸುವ ಸಂಕಲ್ಪ ಮಾಡೋಣ. ಯಾವಾಗ ಜನಶಕ್ತಿ ಮನಸ್ಸು ಮಾಡುತ್ತದೋ, ಆಗ ನಾವು ಜಲ ಶಕ್ತಿಯನ್ನು ಯಶಸ್ವಿಯಾಗಿ ಸಂರಕ್ಷಿಸಬಹುದಾಗಿದೆ.

ಈ ವರ್ಷ, ವಿಶ್ವ ಸಂಸ್ಥೆ ಅರ್ಹವಾದ ಧ್ಯೇಯ – ತ್ಯಾಜ್ಯ ನೀರು, ಆಯ್ಕೆ ಮಾಡಿಕೊಂಡಿದೆ. ಇದು ನೀರು ಪುನರ್ಬಳಕೆ ಮತ್ತು ಇದು ಏಕೆ ನಮ್ಮ ಭೂಗ್ರಹಕ್ಕೆ ಅಗತ್ಯ ಎಂಬ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ “, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/AK