Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಘೇಂಡಾಮೃಗ ದಿನದ ಅಂಗವಾಗಿ ಪ್ರಧಾನಮಂತ್ರಿಗಳಿಂದ ಘೇಂಡಾಮೃಗಗಳ ಸಂರಕ್ಷಣೆಯ ಬದ್ಧತೆಯ ಪುನರುಚ್ಚಾರ


ವಿಶ್ವ ಘೇಂಡಾಮೃಗ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೇಂಡಾಮೃಗಗಳ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಘೇಂಡಾಮೃಗಗಳ ಆವಾಸಸ್ಥಾನವಾಗಿರುವ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ನಾಗರಿಕರು ಭೇಟಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಇಂದು, ವಿಶ್ವ ಘೇಂಡಾಮೃಗ ದಿನದ ಅಂಗವಾಗಿ, ನಾವು ನಮ್ಮ ಭೂಮಿಯ ವಿಶಿಷ್ಟ ಜೀವಿಗಳ ಪೈಕಿ ಒಂದಾಗಿರುವ  ಘೇಂಡಾಮೃಗಗಳ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸೋಣ. ಕಳೆದ ಹಲವಾರು ವರ್ಷಗಳಿಂದ ಘೇಂಡಾಮೃಗಗಳ ಸಂರಕ್ಷಣೆಯಲ್ಲಿ ನಿರತರಾಗಿರುವ ಎಲ್ಲರಿಗೂ ಅಭಿನಂದನೆಗಳು.

ಭಾರತ ಕೊಂಬಿರುವ ಘೇಂಡಾಮೃಗಗಳ ತವರೂರಾಗಿದೆ ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನಾನು ಅಸ್ಸಾಂನ ಕಾಜಿರಂಗಾ ಭೇಟಿಯನ್ನು ಮೆಲುಕು ಹಾಕುತ್ತೇನೆ ಹಾಗೂ ನೀವೂ ಕೂಡ ಅಲ್ಲಿಗೆ ಭೇಟಿ ನೀಡುವಂತೆ ಕೋರುತ್ತೇನೆ.

 

 

*****