Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಕ್ಷಯ ದಿನದಂದು ಪ್ರಧಾನ ಮಂತ್ರಿ ಅವರ ಸಂದೇಶ


ವಿಶ್ವ ಕ್ಷಯ ದಿನದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದೇಶ ನೀಡಿದ್ದು ಅದರ ಹೇಳಿಕೆ ಈ ಕೆಳಗಿನಂತಿದೆ.
 
ವಿಶ್ವ ಕ್ಷಯ ದಿನದ ಈ ವರ್ಷದ  ಶೀರ್ಷಿಕೆ “ ಬೇಕಾಗಿದ್ದಾರೆ: ಕ್ಷಯ ರಹಿತ ವಿಶ್ವಕ್ಕೆ ನಾಯಕರು” ಸ್ಪೂರ್ತಿಯ ಹಿನ್ನೆಲೆಯಲ್ಲಿ ಕ್ಷಯ ರೋಗ ನಿರ್ಮೂಲನೆಯ ಆಂದೋಲನದಲ್ಲಿ ನಾಗರಿಕರು ಮತ್ತು ಸಂಘಟನೆಗಳು ಮುಂಚೂಣಿ ಪಾತ್ರ ವಹಿಸಬೇಕು ಎಂದು ಮನವಿ ಮಾಡುತ್ತೇನೆ . ಕ್ಷಯ ಮುಕ್ತ ವಿಶ್ವ ಮಾನವತೆಗೆ ಒಂದು ಅದ್ಭುತ ಸೇವೆ ಎಂದು ಪ್ರಧಾನ ಮಂತ್ರಿಗಳು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
 
ಭಾರತ ಸರಕಾರವು ಭಾರತವನ್ನು ಕ್ಷಯ ಮುಕ್ತ ಮಾಡಲು ಆಂದೋಲನದೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ವಿಶ್ವವು ಕ್ಷಯ ಮುಕ್ತ ಮಾಡುವ ಗುರಿಯನ್ನು 2030 ಕ್ಕೆ ನಿಗದಿ ಮಾಡಿದ್ದರೂ, ನಾವು ಭಾರತದಲ್ಲಿ ಅದನ್ನು 2025 ರೊಳಗೆ ಸಾಧಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದಿದ್ದಾರೆ.