Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನ ಮಂತ್ರಿ ಅವರಿಂದ ಶಿಲಾನ್ಯಾಸ

ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನ ಮಂತ್ರಿ ಅವರಿಂದ ಶಿಲಾನ್ಯಾಸ

ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನ ಮಂತ್ರಿ ಅವರಿಂದ ಶಿಲಾನ್ಯಾಸ

ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನ ಮಂತ್ರಿ ಅವರಿಂದ ಶಿಲಾನ್ಯಾಸ


 

ಅಹ್ಮದಾಬಾದಿನ ಜಸ್ ಪುರದಲ್ಲಿ ಇಂದು ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಉತ್ಸಾಹಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು , ನಮ್ಮ ಸಮಾಜವನ್ನು ಬಲಿಷ್ಟಗೊಳಿಸುವಲ್ಲಿ ಸಂತರು ಮತ್ತು ಸಾಧುಗಳ ಪಾತ್ರವನ್ನು ಯಾರೂ ಮರೆಯಲಾರರು ಎಂದರು. ಅವರು ನಮಗೆ ಮೌಲ್ಯಯುತವಾದ ಬೋಧನೆಗಳನ್ನು ನೀಡಿದ್ದಾರೆ, ಅವರು ನಮಗೆ ದುಷ್ಟ ಶಕ್ತಿಗಳ ವಿರುದ್ದ ಮತ್ತು ದಬ್ಬಾಳಿಕೆ   ವಿರುದ್ದ ಹೋರಾಡುವ ಶಕ್ತಿಯನ್ನೂ ನೀಡಿದ್ದಾರೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

 

ನಮ್ಮ ಸಂತರು ಮತ್ತು ಸಾಧುಗಳು ನಮ್ಮ ಭೂತಕಾಲದ ಉತ್ತಮವಾದುದನ್ನು ಅಳವಡಿಸಿಕೊಳ್ಳಲು ಹೇಳಿದ್ದಾರೆ, ಅದೇ ವೇಳೆಗೆ ಭವಿಷ್ಯದೆಡೆಗೆ ನೋಡುತ್ತಾ , ಕಾಲದ ಜೊತೆಗೆ ಬದಲಾವಣೆ ಮಾಡಿಕೊಳ್ಳುವುದರ ಬಗ್ಗೆಯೂ ಬೋಧಿಸಿದ್ದಾರೆ ಎಂದರು.

 

ಜನರಿಗೆ ಅನುಕೂಲವಾಗುವ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು ಸಣ್ಣ ಪ್ರಮಾಣದಲ್ಲಿ ಏನಾದರೊಂದು ಮಾಡುವುದು ಕೇಂದ್ರ ಸರಕಾರಕ್ಕೆ ಸಮ್ಮತವಾದುದಲ್ಲ ಎಂದರು. ಕೇಂದ್ರ ಸರಕಾರದ ಕೆಲಸಗಳು ಸದಾ ಕಾಲ ದೊಡ್ಡ ಪ್ರಮಾಣದಲ್ಲಿರುತ್ತವೆ, ಮತ್ತು ಅವು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಯೋಜನಕಾರಿಯಾಗಿರುತ್ತವೆ ಎಂದರು.

 

ಸಮುದಾಯ ಮಟ್ಟದಲ್ಲಿ ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಒತ್ತು ನೀಡುವುದು ಬಹಳ ಪ್ರಮುಖವಾದುದು ಎಂದೂ ಪ್ರಧಾನಮಂತ್ರಿ ಹೇಳಿದರು.

 

ಮಾ ಉಮಿಯಾರನ್ನು ನಂಬುವ ಯಾರೂ ಕೂಡಾ ಭ್ರೂಣಹತ್ಯೆ ಯನ್ನು ಬೆಂಬಲಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ದೃಢವಾಗಿ ಹೇಳಿದರು.

 

ಲಿಂಗತ್ವ ಆಧರಿಸಿದ ಪಕ್ಷಪಾತರಹಿತವಾದ ಸಮಾಜವನ್ನು ನಿರ್ಮಾಣ ಮಾಡಲು ಸಹಾಯ ಮಾಡುವಂತೆ ಪ್ರಧಾನಮಂತ್ರಿ ಅವರು ಜನತೆಗೆ ಮನವಿ ಮಾಡಿಕೊಂದರು.