Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಆರೋಗ್ಯ ದಿನದಂದು ಪ್ರಧಾನಿಯವರ ಸಂದೇಶ

ವಿಶ್ವ ಆರೋಗ್ಯ ದಿನದಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜನತೆಗೆ ಸಂದೇಶ ನೀಡಿದ್ದಾರೆ.

“ಇಂದು ವಿಶ್ವ ಆರೋಗ್ಯ ದಿನ, ನಾವು ಪರಸ್ಪರರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವುದಲ್ಲದೆ, ಮಾರಕ COVID-19 ವಿರುದ್ಧದ ಯುದ್ಧವನ್ನು ಧೈರ್ಯದಿಂದ ಮುನ್ನಡೆಸುತ್ತಿರುವ ಎಲ್ಲ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಬಗ್ಗೆ ನಮ್ಮ ಕೃತಜ್ಞತೆಯನ್ನು ಪುನರುಚ್ಚರಿಸೋಣ.

ಈ ವಿಶ್ವ ಆರೋಗ್ಯ ದಿನದಂದು, ನಾವು ನಮ್ಮ ಜೀವನ ಮತ್ತು ಇತರರ ಜೀವನವನ್ನು ರಕ್ಷಿಸುವ ಸಾಮಾಜಿಕ ಅಂತರದಂತಹ ಅಭ್ಯಾಸಗಳನ್ನು ಅನುಸರಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳೋಣ. ಈ ದಿನವು ವರ್ಷವಿಡೀ ವೈಯಕ್ತಿಕ ಸದೃಢತೆಯತ್ತ ಗಮನ ಹರಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ, ಇದು ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ ” ಎಂದು ಪ್ರಧಾನಿಯವರು ತಿಳಿಸಿದ್ದಾರೆ.