Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಶ್ರೀ ಚಾಬ ಕೊರೊಸಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಶ್ರೀ ಚಾಬ ಕೊರೊಸಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು


ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಪಿಜಿಎ) 77 ನೇ ಅಧಿವೇಶನದ ಅಧ್ಯಕ್ಷ ಶ್ರೀ ಚಾಬ ಕೊರೊಸಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಸಭೆಯಲ್ಲಿ, ಶ್ರೀ ಚಾಬ ಕೊರೊಸಿ   ಅವರು ಜಲ ಸಂಪನ್ಮೂಲ ನಿರ್ವಹಣೆ ಮತ್ತು ಸಂರಕ್ಷಣೆಯ ಕ್ಷೇತ್ರ ಸೇರಿದಂತೆ ಸಮುದಾಯಗಳಿಗೆ ಭಾರತದ ಪರಿವರ್ತನೆಯ ಉಪಕ್ರಮಗಳನ್ನು ಶ್ಲಾಘಿಸಿದರು. ಸುಧಾರಿತ ಬಹುಪಕ್ಷೀಯತೆಯ ಕಡೆಗೆ ಭಾರತದ ಪ್ರಯತ್ನಗಳನ್ನು ಅಂಗೀಕರಿಸಿದ ಶ್ರೀ ಚಾಬ ಕೊರೊಸಿ   ಅವರು ಜಾಗತಿಕ ಸಂಸ್ಥೆಗಳನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಭಾರತವು ಮುಂಚೂಣಿಯಲ್ಲಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಪ್ರಧಾನಮಂತ್ರಿಯವರು ಅಧಿಕಾರ ವಹಿಸಿಕೊಂಡ ನಂತರ ಭಾರತವನ್ನು ತಮ್ಮ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಆಯ್ತುಕೊಂಡದ್ದಕ್ಕಾಗಿ  ಶ್ರೀ ಚಾಬ ಕೊರೊಸಿ  ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಶ್ರೀ ಚಾಬ ಕೊರೊಸಿ   ಅವರ ವಿಧಾನವನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಅವರು  ವಿಶ್ವ2023 ಜಲ ಸಮ್ಮೇಳನ ಸೇರಿದಂತೆ 77 ನೇ  ವಿಶ್ವಸಂಸ್ಥೆಯ ಸಮಾನ್ಯ ಸಭೆಯಲ್ಲಿ ಅವರ ಅಧ್ಯಕ್ಷೀಯ ಉಪಕ್ರಮಗಳಿಗೆ ಭಾರತದ ಸಂಪೂರ್ಣ ಬೆಂಬಲದ  ಭರವಸೆಯನ್ನು ಶ್ರೀ ಚಾಬ ಕೊರೊಸಿ ಅವರಿಗೆ ಭರವಸೆ ನೀಡಿದರು.
ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು  ಯಥಾವತ್ತಾಗಿ ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿಯವರು  ಒತ್ತಿ ಹೇಳಿದರು 

*****