ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 1 ಡಿಸೆಂಬರ್ 2023 ರಂದು ದುಬೈನಲ್ಲಿ ನಡೆದ COP 28 ಶೃಂಗಸಭೆಯ ನೇಪಥ್ಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ (UNSG) ಶ್ರೀ ಆಂಟೋನಿಯೊ ಗುಟಾರೆಸ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಭಾರತದ G20 ಪ್ರೆಸಿಡೆನ್ಸಿ ಅವಧಿಯಲ್ಲಿ UNSG ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಧನ್ಯವಾದಗಳನ್ನು ತಿಳಿಸಿದರು. ಹವಾಮಾನ ಗುರಿಗಳನ್ನು ಸಾಧಿಸುವಲ್ಲಿ ಭಾರತದ ಉಪಕ್ರಮಗಳು ಮತ್ತು ಪ್ರಗತಿಯನ್ನು ಅವರು ವಿವರಿಸಿದರು.
ವಿಶ್ವಸಂಸ್ಥೆ ಸೇರಿದಂತೆ ಬಹುಪಕ್ಷೀಯ ಆಡಳಿತ ಮತ್ತು ಹಣಕಾಸು ಸಂಸ್ಥೆಗಳ ಕ್ರಮ, ಹಣಕಾಸು, ತಂತ್ರಜ್ಞಾನ ಮತ್ತು ಸುಧಾರಣೆಗಳಿಗೆ ಸಂಬಂಧಿಸಿದ ಜಾಗತಿಕ ದಕ್ಷಿಣದ ಆದ್ಯತೆಗಳು ಮತ್ತು ಕಾಳಜಿಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅವರು ಸುಸ್ಥಿರ ಅಭಿವೃದ್ಧಿ, ಹವಾಮಾನ ಕ್ರಮ, ಎಂಡಿಬಿ ಸುಧಾರಣೆಗಳು ಮತ್ತು ಜಿ20 ಪ್ರೆಸಿಡೆನ್ಸಿ ಅಡಿಯಲ್ಲಿ ವಿಪತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿಯವರ ಗ್ರೀನ್ ಕ್ರೆಡಿಟ್ ಉಪಕ್ರಮವನ್ನು ಅವರು ಸ್ವಾಗತಿಸಿದರು. ಭಾರತದ ಪ್ರೆಸಿಡೆನ್ಸಿಯ ಸಾಧನೆಗಳನ್ನು ನಿರ್ಮಿಸಲು ಮತ್ತು ಭವಿಷ್ಯದ ವಿಶ್ವಸಂಸ್ಥೆ ಶೃಂಗಸಭೆ 2024 ರಲ್ಲಿ ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ಭಾರತದೊಂದಿಗೆ ಕೆಲಸ ಮಾಡುವ ಕುರಿತು ಭರವಸೆ ನೀಡಿದರು.
****
In Dubai, PM @narendramodi had a meeting with the @UN Secretary-General @antonioguterres. They discussed the Global South's priorities and concerns about climate action, climate finance, technology, and reforms pertaining to multilateral institutions. pic.twitter.com/FMaKOWd4G3
— PMO India (@PMOIndia) December 1, 2023