Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವಬ್ಯಾಂಕ್ ನ ಜಿ20 ದಾಖಲೆಯು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಭಾರತದ ಆರ್ಥಿಕ ಸೇರ್ಪಡೆಯನ್ನು ಪ್ರಶಂಸಿಸಿದೆ


ವಿಶ್ವ ಬ್ಯಾಂಕ್ ತನ್ನ ಜಿ20 ದಾಖಲೆಯಲ್ಲಿ ಭಾರತವು ಕಳೆದ ಕೇವಲ 6 ವರ್ಷಗಳಲ್ಲಿ ಆರ್ಥಿಕ ಸೇರ್ಪಡೆ ಗುರಿಗಳನ್ನು ಸಾಧಿಸಿದೆ, ಇಲ್ಲದಿದ್ದರೆ ಸಾಮಾನ್ಯವಾಗಿ ಕನಿಷ್ಠ 47 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂಬ ಸಂಶೋಧನಾ ವರದಿಯನ್ನು ಉಲ್ಲೇಖಿಸಿದೆ. ಈ ಮಾಹಿತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ “ಎಕ್ಸ್” ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

” ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮೂಲಕ ಅತ್ಯಧಿಕ ಆರ್ಥಿಕ ಸೇರ್ಪಡೆಯಲ್ಲಿ ಭಾರತ ಮಹತ್ತರ ಸಾಧನೆ ಮಾಡಿದೆ!

@ವಿಶ್ವಸಂಸ್ಥೆ ( @WorldBank ) ಸಿದ್ಧಪಡಿಸಿದ ಜಿ20 ದಾಖಲೆಯು ಭಾರತದ ಅಭಿವೃದ್ಧಿಯ ಬಗ್ಗೆ ಬಹಳ ಆಸಕ್ತಿಯ ಅಂಶವನ್ನು ಹಂಚಿಕೊಂಡಿದೆ. ಭಾರತವು ಕೇವಲ 6 ವರ್ಷಗಳಲ್ಲಿ ಆರ್ಥಿಕ ಸೇರ್ಪಡೆಯ ಗುರಿಗಳನ್ನು ಸಾಧಿಸಿದೆ, ಇಲ್ಲದಿದ್ದರೆ ಸಾಮಾನ್ಯವಾಗಿ ಇದಕ್ಕೆ  ಕನಿಷ್ಠ 47 ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು.

ನಮ್ಮ ಸದೃಢವಾದ ಡಿಜಿಟಲ್ ಪಾವತಿ ಮೂಲಸೌಕರ್ಯ ಮತ್ತು ನಮ್ಮ ಜನರ ಉತ್ಸಾಹಕ್ಕೆ ಅಭಿನಂದನೆಗಳು. ಇದು ಕ್ಷಿಪ್ರ ಪ್ರಗತಿ ಮತ್ತು ನಾವೀನ್ಯತೆಗೆ ಸಮಾನವಾಗಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಸಾಕ್ಷಿಯಾಗಿದೆ.”

https://www.news18.com/india/if-not-for-digital-payment-infra-in-6-yrs-india-would-have-taken-47-yrs-to-achieve-growth-world-bank-8568140.html” 


*******