Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವದ 31 ಜೌಗುಭೂಮಿ ಮಾನ್ಯತೆ ಪಡೆದ ನಗರಗಳ ಪಟ್ಟಿಗೆ ಇಂದೋರ್ ಮತ್ತು ಉದಯಪುರ ಸೇರ್ಪಡೆ : ಪ್ರಧಾನಮಂತ್ರಿ ಅಭಿನಂದನೆ


ವಿಶ್ವದ 31 ಜೌಗುಭೂಮಿ (ತೇವಾಂಶಯುಕ್ತ ನೆಲ) ಮಾನ್ಯತೆ ಪಡೆದ ನಗರಗಳ ಪಟ್ಟಿಗೆ ಸೇರ್ಪಡೆಗೊಂಡ ಇಂದೋರ್ ಮತ್ತು ಉದಯಪುರ ನಗರಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಈ ಮಾನ್ಯತೆಯು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಕೃತಿ ಮತ್ತು ನಗರ ಬೆಳವಣಿಗೆಯ ನಡುವಿನ ಸಾಮರಸ್ಯವನ್ನು ಪೋಷಿಸುವ ಭಾರತದ ಅಚಲ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಎಕ್ಸ್ ಪೋಸ್ಟ್‌ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:

“ಇಂದೋರ್ ಮತ್ತು ಉದಯಪುರಕ್ಕೆ ಅಭಿನಂದನೆಗಳು! ಈ ಮನ್ನಣೆಯು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಕೃತಿ ಮತ್ತು ನಗರ ಬೆಳವಣಿಗೆಯ ನಡುವಿನ ಸಾಮರಸ್ಯವನ್ನು ಪೋಷಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದೇಶಾದ್ಯಂತ ಹಸಿರು, ಸ್ವಚ್ಛ ಮತ್ತು ಇನ್ನಷ್ಟು ಪರಿಸರ ಸ್ನೇಹಿ ನಗರ ಸ್ಥಳಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಈ ಸಾಧನೆಯು ಎಲ್ಲರಿಗೂ ಸ್ಫೂರ್ತಿ ನೀಡಲಿ.”
 

 

*****