Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವದ ಸುಸ್ಥಿರ ಅಭಿವೃದ್ಧಿ TERI ಸಮ್ಮಿಲನವನ್ನು ಉದ್ದೇಶಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ಘಾಟನಾ ಭಾಷಣ

ವಿಶ್ವದ ಸುಸ್ಥಿರ ಅಭಿವೃದ್ಧಿ TERI ಸಮ್ಮಿಲನವನ್ನು ಉದ್ದೇಶಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ಘಾಟನಾ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ The Energy and Resources Institute’s (TERI) ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ನೀಡಿದರು. ವಿಡಿಯೊ ಮೆಸೇಜಿನ ಮುಖಾಂತರ ಡಾಮಿನಿಕನ್‌ ರಿಪಬ್ಲಿಕ್‌ನ ರಾಷ್ಟ್ರಪತಿ ಶ್ರೀ ಲುಯಿಸ್‌ ಅಬಿನಾದೆರ್‌, ಗುಯಾನಾ ಗಣರಾಜ್ಯದ ಅಧ್ಯಕ್ಷ ಮೊಹ್ಮದ್‌ ಇರ್ಫಾನ್‌ ಅಲಿ, ವಿಶ್ವಸಂಸ್ಥೆಯ ಪ್ರಧಾನ ಉಪ ಕಾರ್ಯದರ್ಶಿ ಅಮಿನಾ ಜೆ ಮೊಹಮ್ಮದ್‌, ಕೇಂದ್ರ ಸಚಿವ ಭುಪಿಂದರ್‌ ಯಾದವ್‌ ಸಂದರ್ಭದಲ್ಲಿ ಹಾಜರಿದ್ದರು.

ಪ್ರಧಾನ ಮಂತ್ರಿಗಳು ತಮ್ಮ  20 ವರ್ಷಗಳ ಕಾರ್ಯವೈಖರಿಯಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಸ್ಮರಿಸಿದರು. ಮೊದಲಿಗೆ ಗುಜರಾತ್‌ ಮತ್ತು ಈಗ ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಆದ್ಯತೆ ಕೊಡುತ್ತಿರುವುದಾಗಿ ತಿಳಿಸಿದರು. ನಮ್ಮ ಭೂಗ್ರಹದ ಸ್ಥಿತಿ ನಾಜೂಕಾಗಿಲ್ಲ. ಆದರೆ ಅದನ್ನು ಉಳಿಸಲು ತೆಗೆದುಕೊಂಡಿರುವ ನಿರ್ಣಯಗಳು ನಾಜೂಕಾಗಿವೆ. ಪ್ರಕೃತಿ ನಾಜೂಕಾಗುತ್ತಿದೆ. ನಾವು ಪ್ರಕೃತಿಯ ರಕ್ಷಣೆಗೆ 50 ವರ್ಷಗಳಿಂದ ಚರ್ಚೆಗಳು, ಮಾತುಗಳು ನಡೆಯುತ್ತಿದ್ದರೂ ಸ್ವಲ್ಪಸ್ವಲ್ಪವೇ ಕೆಲಸ ಆಗ್ತಿದೆ. 1972 ಸ್ಟಾಕ್‌ಹೋಮ್‌ ಸಭೆಯಲ್ಲಿ ಚರ್ಚೆ ನಡೆದ ನಂತರದ ಕೆಲಸಗಳನ್ನು ನೋಡಿದರೆ ಇದು ಮನನವಾಗುತ್ತದೆ. ಆದರೆ ಭಾರತದಲ್ಲಿ ಹಾಗಾಗಿಲ್ಲ, ನುಡಿದಂತೆ ನಡೆದಿದ್ದೇವೆ. ಬಡವರಿಗೂ ಪರಿಶುದ್ಧ ಇಂಧನವನ್ನು ನೀಡುವುದರಲ್ಲಿ ನಮ್ಮ ಪರಿಸರ ನೀತಿಯು ಸಬಲವಾಗಿದೆ ಎಂದು ಹೇಳಿದರು. 90 ದಶಲಕ್ಷ ಗೃಹಿಣಿಯರಿಗೆ ಅಡುಗೆ ಮಾಡಲು ಉಜ್ವಲಾ ಯೋಜನೆ ಅಡಿಯಲ್ಲಿ, ನವೀಕರಿಸಬಹುದಾದ ಇಂಧನವನ್ನು ಪಿಎಂಕುಸುಮ್‌ ಯೋಜನೆಯ ಅಡಿಯಲ್ಲಿ ಕೃಷಿಕರಿಗೂ ನೀಡಲಾಗುತ್ತಿದೆ.

ಕಳೆದ ಏಳು ವರ್ಷಗಳಿಂದ ವಿದ್ಯುತ್‌ ಬಳಕೆಯಲ್ಲಿ ಮಿತವ್ಯಯ ತರಲು ಎಲ್‌ಇಡಿ ಬಲ್ಬುಗಳನ್ನು ಹಂಚಲು ಕಳೆದ ಏಳುವರ್ಷಗಳಿಂದ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಜಗತ್ತಿನ ಗಮನ ಸೆಳೆದರು. ಇದರಿಂದ 220 ಬಿಲಿಯನ್‌ ವಿದ್ಯುತ್‌ಶಕ್ತಿ ಉಳಿಸಿದಂತಾಯಿತು. 180 ಬಿಲಿಯನ್‌ ಕಾರ್ಬನ್‌ ಡೈ ಆಕ್ಸೈಡ್‌ ಉಗುಳುವುದನ್ನು ನಿಯಂತ್ರಿಸಿದಂತಾಯಿತು. ರಾಷ್ಟ್ರೀಯ ಜಲಶಕ್ತಿ ಅಭಿಯಾನವು ಹಸಿರು ಜಲಶಕ್ತಿ ಯೋಜನೆಯಾಗಿ ಪರಿವರ್ತಿಸಲಾಗಿದೆ. ಟೇರಿಯಂಥ ಸಂಸ್ಥೆಗಳ ಜೊತೆಗೆ ಇಂಥ ಪರಿಹಾರಗಳು ಸಶಕ್ತ ಪರಿಹಾರವಾಗಲಿವೆ.

2.4%ರಷ್ಟು ಭೂ ಪ್ರದೇಶ ಇರುವ ದೇಶದಲ್ಲಿ ಜಾಗತಿಕವಾಗಿ ಶೇ 8ರಷ್ಟು ಪ್ರಭೇದಗಳು ಭಾರತದಲ್ಲಿವೆಪ್ರಧಾನ ಮಂತ್ರಿಗಳು ನಮ್ಮ ಪರಿಸರದಲ್ಲಿರುವ ಬಹುತ್ವದ ಕುರಿತು ಅಪಾರವಾದ ಕಾಳಜಿಯನ್ನು ವ್ಯಕ್ತಪಡಿಸಿದರು.

ಸಂರಕ್ಷಿತ ಪ್ರದೇಶಧ ಜಾಲವನ್ನು ಬಲಪಡಿಸುವ ಪ್ರಯತ್ನಗಳ ಕುರಿತು ಗಮನಸೆಳೆದ ಪ್ರಧಾನಿಗಳು, ಜಾಗತಿಕ ಮಟ್ಟದಲ್ಲಿ ಭಾರತೀಯ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುತ್ತಿದೆ. ಪ್ರಕೃತಿ ರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ (The International Union for Conservation of Nature (IUCN)ದಲ್ಲಿ ಪಡೆದಿರುವ ಮಾನ್ಯತೆಯತ್ತಲೂ ಗಮನ ಸೆಳೆದರು. ಹರಿಯಾಣದಲ್ಲಿರುವ ಅರವಲ್ಲಿ ಜೀವವೈವಿಧ್ಯ ಪಾರ್ಕ್‌ನಲ್ಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಿರುವುದು O.E.C.M. ಪ್ರದೇಶವಾಘಿ ಪರಿಗಣಿಸಿರುವುದನ್ನು ತಿಳಿಸಿದರು. ಇದಲ್ಲದೆ ರಾಮಸರ್‌ ಕ್ಷೇತಗಳಲ್ಲಿ 49 ಕ್ಷೇತ್ರಗಳಿದ್ದು, ಒಂದು ದಶಲಕ್ಷ ಹೆಕ್ಟೇರ್‌ಗೆ ಇದು ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ಫಲವತ್ತಲ್ಲದ ಜಮೀನನ್ನು ಉನ್ನತೀಕರಿಸಿದ ಬಗ್ಗೆ ಮುಖ್ಯ ಭೂಪ್ರದೇಶದ ಕಾಳಜಿ ಮಾಡಲು 2015ರಿಂದ ಕ್ರಮಕೈಗೊಳ್ಳಲಾಗಿದೆ. 11.5 ದಶಲಕ್ಷ ಹೆಕ್ಟೇರ್‌ ಭೂಮಿಯನ್ನು ಮರುಸ್ಥಾ‍ಪಿಸಲಾಗಿದೆ. ಭೂ ನಿರುಪಯುಕ್ತವಾಗುವುದರ ವಿರುದ್ಧ ತಟಸ್ಥ ಸ್ಥಿತಿಯನ್ನು ಸ್ಥಾಪಿಸುವ ಕ್ರಮವನ್ನು ಸವಾಲಾಗಿ ಸ್ವೀಕರಿಸಲಾಗಿದೆ. ಅದಕ್ಕೆ ದೇಶ ತನ್ನ ಬದ್ಧತೆಯನ್ನು ತೋರಿಸುತ್ತದೆ. ಗ್ಲಾಸ್ಗೊ26ರಲ್ಲಿ ನಿರ್ಧರಿಸಿದ ತೀರ್ಪುಗಳಲ್ಲಿ ಟ್ರಿಪಲ್‌ ಸಿ ಮತ್ತು ಯುಎನ್‌ಎಫ್ಅಡಿಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಮೋದಿ ತಿಳಿಸಿದರು.

ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಸುಸ್ಥಿರ ಪರಿಸರ ಅಭಿವೃದ್ಧಿ ಮೂಲ ಪರಿಹಾರವಾಗಲಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಹಾಗೂ ನೈತಿಕ ಹೊಣೆಗಾರಿಕೆ ಒಟ್ಟೊಟ್ಟಿಗೆ ಸಾಗುತ್ತಿದೆ. ಮುಂಬರಲಿರುವ ಎರಡು ದಶಕಗಳಲ್ಲಿ ಜನರಿಗೆ ಅಗತ್ಯವಿರುವ ಇಂಧನದ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಒಂದು ವೇಳೆ ಇಂಧನಶಕ್ತಿಯನ್ನು ನಿರಾಕರಿಸಿದರೆ ಲಕ್ಷಾನುಗಟ್ಟಲೆ ಜನರಿಂದ ಜನಜೀವನವನ್ನೇ ಕಸಿದಂತಾಗುತ್ತದೆ. ನಿಟ್ಟಿನಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ತೋರಬೇಕಿದೆ. ಹಣಕಾಸಿನ ವಿಷಯದಲ್ಲಿಯೂ, ತಂತ್ರಜ್ಞಾನದ ವಿಷಯದಲ್ಲಿಯೂ ವರ್ಗಾವಣೆ ಮಾಡುವ ವಿಷಯದಲ್ಲಿ ತಮ್ಮ ಬದ್ಧತೆಯನ್ನು ತೋರಬೇಕಿದೆ ಎಂಬ ವಿಷಯದತ್ತ ಹೆಚ್ಚು ಹೆಚ್ಚು ಒತ್ತು ನೀಡಿದರು.

ಜಾಗತಿಕವಾಗಿ ಸಮಾನ ಮನಸ್ಕ ರಾಷ್ಟ್ರಗಳು ಸುಸ್ಥಿರ ಬೆಳವಣಿಗೆಗಾಗಿ ಶ್ರಮಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತು ನೀಡಿದರು. ಅಂತರ್‌ ಅವಲಂಬನೆಯನ್ನು ಗುರುತಿಸಿದ ಪ್ರಧಾನಿ, ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿರುತ್ತವೆ. ಅಂತರರಾಷ್ಟ್ರೀಯ ಸೌರ ಸಂಯೋಜನೆಯಲ್ಲಿ ನಮ್ಮ ಉದ್ದೇಶ ಒಂದು ಸೂರ್ಯ, ಒಂದು ಜಗತ್ತು ಮತ್ತು ಒಂದು ಗ್ರಿಡ್‌ ಸೂತ್ರದ ಅಡಿಯಲ್ಲಿ ಶ್ರಮಿಸುತ್ತಿದ್ದೇವೆ ಎಂದರು. ಪರಿಶುದ್ಧ ಶಕ್ತಿಯನ್ನು ಪಡೆಯುವಲ್ಲಿ ನಮ್ಮ ಪ್ರಯತ್ನಗಳು ಸಾಗಿರುವ ಸಮಯದಲ್ಲಿ ಸಮಗ್ರ ಸಮಷ್ಟಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರಮಿಸಬೇಕಾಗಿದೆ. ಆದರೆ ಒಟ್ಟುಗೂಡಿ ಸುಸ್ಥಿರತೆಯನ್ನು ಸಾಧಿಸಬೇಕಿದೆ ಎಂದು ಒತ್ತು ನೀಡಿ ಹೇಳಿದರು

ಪ್ರಕೃತಿ ವಿಕೋಪದಿಂದ ಪರಿಣಾಮ ಬೀರುವ ಭೂ ಪ್ರದೇಶಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಸಿಡಿಆರ್‌ಐ ಮತ್ತು ದ್ವೀಪಗಳ ನಿರ್ಮಾಣ ಮತ್ತು  ಚೇತರಿಕೆಗೆ ಸಂಬಂಧಿಸಿದಂತೆ ಇವುಗಳಿಗೆ ಹೆಚ್ಚು ಹೆಚ್ಚು ಸಂರಕ್ಷಣೆ ಬೇಕಿದೆ ಎಂದು ಸಹ ಗಮನಸೆಳೆದರು.

ಜೀವನ ಮತ್ತು ಜೀವನಶೈಲಿ ಹಾಗೂ ಗ್ರಹಪರಜನರು (ಪ್ರೊ ಪ್ಲಾನೆಟ್‌ ಪೀಪಲ್ 3–ಪಿ) ಹಾಗೂ ಪರಿಸರ ರಕ್ಷಣೆಗಾಗಿ ಜಾಗತಿಕ ತಾಪಮಾನದ ನಿಯಂತ್ರಣಕ್ಕಾಗಿ ಸಮಾನ ಮನಸ್ಕ ರಾಷ್ಟ್ರಗಳು, ಜನರು ಒಗ್ಗೂಡಿ ಶ್ರಮಿಸಬೇಕಾಗಿದೆ. ಇದಕ್ಕಾಗಿ ಸಮಗ್ರ ಸಮಷ್ಟಿಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕಾಗಿದೆ.

***