Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ವಿಶ್ವದ ಅಗ್ರ ಶ್ರೇಯಾಂಕಿತ ಮ್ಯಾಗ್ನಸ್ ಕಾರ್ಲಸನ್‌ ಅವರ ವಿರುದ್ದ ಗೆಲುವು ಸಾಧಿಸಿದ ಕಾರ್ತಿಕೇಯನ್‌ ಮುರಳಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ  


ಕತಾರ್‌ ಮಾಸ್ಟರ್ಸ್‌ 2023 ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಮ್ಯಾಗ್ನಸ್‌ ಕಾರ್ಲಸನ್‌ ವಿರುದ್ಧ ಗೆಲುವು ಸಾಧಿಸಿದ ಕಾರ್ತಿಕೇಯನ್‌ ಮುರಳಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಸಾಮಾಜಿಕ ಜಾಲ ತಾಣ ಎಕ್ಸ್‌ ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಪ್ರಧಾನಮಂತ್ರಿ ಅವರು,

“ಕತಾರ್‌ ಮಾಸ್ಟರ್‌ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ @KarthikeyanM64 ಅವರಿಗೆ ಅಭಿನಂದನೆಗಳು. ನಿಮ್ಮ ಯಶಸ್ಸು ಭಾರತಕ್ಕೆ ಹೆಮ್ಮೆ ತಂದಿದೆ. ಹಾಲಿ ಚೆಸ್‌ ಚಾಂಪಿಯನ್‌ ಮತ್ತು ವಿಶ್ವದ ಅಗ್ರಶ್ರೇಯಾಂಕಿತ ಮ್ಯಾಗ್ನಸ್‌ ಕಾರ್ಲಸನ್‌ ಅವರನ್ನು ಪರಾಭವಗೊಳಿಸುವ ಮೂಲಕ ನಂಬಲಾಗದ ಸಾಧನೆ ಮಾಡಿದ್ದಾರೆ.

ಅವರು ಅದ್ಭುತ ಕೆಲಸವನ್ನು ಮುಂದುವರೆಸಲಿ ಮತ್ತು ಮುಂದಿನ ಹಂತಕ್ಕೆ ಅವರಿಗೆ ಶುಭ ಹಾರೈಕೆಗಳು.” ಎಂದು ಹೇಳಿದ್ದಾರೆ.

***