ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಪ್ರಧಾನಿ ಕೋಸ್ಟಾ ಅವರು ಲಿಸ್ಬನ್ ನಲ್ಲಿಂದು ವಿಶಿಷ್ಠ ನವೋದ್ಯಮ ಪೋರ್ಟಲ್ – ಭಾರತ – ಪೋರ್ಚುಗಲ್ ಅಂತಾರಾಷ್ಟ್ರೀಯ ನವೋದ್ಯಮ ತಾಣ (ಐಪಿಐಎಸ್.ಎಚ್.) ಗೆ ಚಾಲನೆ ನೀಡಿದರು.
ಪರಸ್ಪರ ಪೂರಕವಾದ ಉದ್ಯಮಶೀಲತೆಯ ಪಾಲುದಾರಿಕೆಯ ಸೃಷ್ಟಿಗಾಗಿ, ನವೋದ್ಯಮ ಭಾರತದಿಂದ ಆರಂಭಿಸಲಾದ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಪೋರ್ಚುಗಲ್ ನವೋದ್ಯಮ ಬೆಂಬಲಿತ ವೇದಿಕೆಯಿದಾಗಿದೆ,
ಐ.ಪಿ.ಐ.ಎಸ್.ಎಚ್. ಒಂದು ಶ್ರೇಣಿಯ ಸಾಧನಗಳನ್ನು ಆಯೋಜಿಸುತ್ತದೆ ಮತ್ತು ಬೆಂಗಳೂರು, ದೆಹಲಿ ಮತ್ತು ಲಿಸ್ಬನ್ ನ ನವೋದ್ಯಮ ಹಾಟ್ ಸ್ಪಾಟ್ ಗಳ; ಮತ್ತು ಅದಕ್ಕೆ ಪೂರಕವಾದ ವಿಷಯಗಳ ಅಂದರೆ ನೀತಿ, ತೆರಿಗೆ ಮತ್ತು ವೀಸಾ ಆಯ್ಕೆ ಇತ್ಯಾದಿಯಮಾಹಿತಿಯನ್ನು ಪೂರೈಸುತ್ತದೆ. ನವೋದ್ಯಮಗಳಿಗೆ ಬೆಂಬಲ ನೀಡಲು ಗೋ-ಟು-ಮಾರ್ಕೆಟ್ ಮಾರ್ಗದರ್ಶಿಯನ್ನೂ ಇದು ಅಭಿವೃದ್ಧಿ ಮಾಡುತ್ತದೆ.
ಐ.ಪಿ.ಐ.ಎಸ್.ಎಚ್. ಪರಸ್ಪರ ಸಾಮರ್ಥ್ಯವರ್ಧನೆಗೆ ನೆರವಾಗುತ್ತದೆ ಮತ್ತು ನವೋದ್ಯಮಗಳು, ಹೂಡಿಕೆದಾರರು ಮತ್ತು ಸೂಕ್ತ ವಲಯದಲ್ಲಿ ಆರಂಭಿಕರ ನಡುವೆ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತ ಮತ್ತು ಪೋರ್ಚುಗಲ್ ಮೂಲದ ಗೌರವಾನ್ವಿತ ರಾಯಭಾರಿಗಳ ಜಾಲವನ್ನು ಎರಡೂ ದೇಶಗಳಿಂದ ಪ್ರಾರಂಭಿಸಲು ಮಾರ್ಗದರ್ಶನ ನೀಡುತ್ತದೆ ಎಂಬ ನಿರೀಕ್ಷಿಸಲಾಗಿದೆ.
ಹಿನ್ನೆಲೆ:
ನವೋದ್ಯಮ ವಲಯದಲ್ಲಿ ಭಾರತ ಮತ್ತು ಪೋರ್ಚುಗಲ್ ನಡುವೆ ಬಲವಾದ ಪೂರಕತೆಯಿದೆ. ಯೂರೋಪ್ ನಲ್ಲಿ ಅತಿ ಹೆಚ್ಚಿನ ದರದಲ್ಲಿ ವಾಣಿಜ್ಯ ಸೃಷ್ಟಿಸುವುದರಲ್ಲಿ ಪೋರ್ಚುಗಲ್ ಒಂದಾಗಿದ್ದು, ಅದು ಉದ್ಯಮಶೀಲತೆಯಲ್ಲಿ ಯೂರೋಪ್ ನ ಚೈತನ್ಯಶೀಲ ಪರಿಸರ ವ್ಯವಸ್ಥೆ ಹೊಂದಿರುವ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಲಿಸ್ಬನ್ 2016ರ ತರುವಾಯ 3 ವರ್ಷಗಳಿಂದ ಪ್ರಮುಖ ಅಂತಾರಾಷ್ಟ್ರೀಯ ವಾರ್ಷಿಕ ತಾಂತ್ರಿಕ ಸಮಾವೇಶ -ವೆಬ್ ಶೃಂಗ ಆಯೋಜಿಸುತ್ತಿದೆ. ಕಳೆದ ವೆಬ್ ಶೃಂಗದಲ್ಲಿ ಭಾರತದ 700 ಮಂದಿ ಭಾಗವಹಿದ್ದರು, ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಭಾರತ ಸರ್ಕಾರದ ಮತ್ತು ಪೋರ್ಚುಗಲ್ ಸರ್ಕಾರಗಳು ನವೋದ್ಯಮವನ್ನು ಉತ್ತೇಜಿಸುವತ್ತ ಗಮನ ಹರಿಸಿವೆ.
***
VBA/HS