Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶಾಖಪಟ್ಟಣಂನಲ್ಲಿ ಉದ್ದೇಶಿತ ದಕ್ಷಿಣ ಕರಾವಳಿ ರೈಲ್ವೆ ವಲಯದ ಅಡಿಯಲ್ಲಿ ವಿಭಾಗೀಯ ಅಧಿಕಾರ ವ್ಯಾಪ್ತಿಯನ್ನು ಕಡಿತಗೊಳಿಸಿದ ವಾಲ್ಟೇರ್ ವಿಭಾಗವನ್ನು ಉಳಿಸಿಕೊಳ್ಳುವ ಮೂಲಕ ಪರಿಷ್ಕರಿಸುವುದು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕೆಳಗಿನವುಗಳಿಗೆ ಪೂರ್ವಾನ್ವಯಗೊಂಡಂತೆ ತನ್ನ  ಅನುಮೋದನೆ ನೀಡಿದೆ:

i. ವಾಲ್ಟೇರ್ ವಿಭಾಗವನ್ನು ಸಂಕುಚಿತ ರೂಪದಲ್ಲಿ ಉಳಿಸಿಕೊಳ್ಳಲು ಮತ್ತು ಅದನ್ನು ವಿಶಾಖಪಟ್ಟಣಂ ವಿಭಾಗ ಎಂದು ಮರುನಾಮಕರಣ ಮಾಡಲು ದಿನಾಂಕ 28.02.2019ರ ಕ್ಯಾಬಿನೆಟ್ ನಲ್ಲಿ ಕೈಗೊಂಡ  ಹಿಂದಿನ ನಿರ್ಧಾರದ ಭಾಗಶಃ ಮಾರ್ಪಾಡು.

ii. ಹೀಗಾಗಿ, ಪಲಾಸಾ-ವಿಶಾಖಪಟ್ಟಣಂ-ದುವ್ವಾಡಾ, ಕುನೇರು-ವಿಜಯನಗರಂ, ನೌಪಾಡಾ ಜಂಕ್ಷನ್-ಪರ್ಲಾಖೇಮುಂಡಿ, ಬೊಬ್ಬಿಲಿ ಜಂಕ್ಷನ್-ಸಾಲೂರು, ಸಿಂಹಾಚಲಂ ಉತ್ತರ-ದುವ್ವಾಡ ಬೈಪಾಸ್, ವಡಲಪುಡಿ-ದುವ್ವಾಡಾ ಮತ್ತು ವಿಶಾಖಪಟ್ಟಣಂ ಉಕ್ಕು ಸ್ಥಾವರ – ಜಗ್ಗಯಪಲೆಂ (ಸುಮಾರು 410 ಕಿ.ಮೀ) ನಿಲ್ದಾಣಗಳ ನಡುವಿನ ವಿಭಾಗಗಳನ್ನು ಒಳಗೊಂಡಿರುವ ವಾಲ್ಟೇರ್ ವಿಭಾಗದ ಒಂದು ಭಾಗವನ್ನು ವಾಲ್ಟೇರ್ ವಿಭಾಗದ ಅಡಿಯಲ್ಲಿ ಉಳಿಸಿಕೊಳ್ಳಲಾಗುವುದು. ವಾಲ್ಟೇರ್ ಹೆಸರು ವಸಾಹತುಶಾಹಿ ಪರಂಪರೆಯಾಗಿದ್ದು, ಅದನ್ನು ಬದಲಾಯಿಸಬೇಕಾಗಿದೆ ಎಂಬ ಕಾರಣಕ್ಕೆ  ಇದನ್ನು ವಿಶಾಖಪಟ್ಟಣಂ ವಿಭಾಗ ಎಂದು ಮರುನಾಮಕರಣ ಮಾಡಲಾಗುವುದು.

iii. ಕೊಟ್ಟವಲಾಸ – ಬಚೇಲಿ, ಕುನೇರು – ತೇರುವಾಲಿ ಜಂಕ್ಷನ್, ಸಿಂಗಾಪುರ ರಸ್ತೆ – ಕೊರಾಪುಟ್ ಜಂಕ್ಷನ್ ಮತ್ತು ಪರ್ಲಖೇಮುಂಡಿ – ಗುನ್ಪುರ್ (ಸುಮಾರು 680 ಕಿ.ಮೀ) ನಿಲ್ದಾಣಗಳ ನಡುವಿನ ವಿಭಾಗಗಳನ್ನು ಒಳಗೊಂಡಿರುವ ವಾಲ್ಟೇರ್ ವಿಭಾಗದ ಇತರ ಭಾಗವನ್ನು ಪೂರ್ವ ಕರಾವಳಿ ರೈಲ್ವೆಯ ರಾಯಗಡದಲ್ಲಿ ಪ್ರಧಾನ ಕಚೇರಿಯೊಂದಿಗೆ ಹೊಸ ವಿಭಾಗವಾಗಿ ಪರಿವರ್ತಿಸಲಾಗುವುದು.

ವಾಲ್ಟೇರ್ ವಿಭಾಗವನ್ನು ಅದರ ಸಂಕುಚಿತ ರೂಪದಲ್ಲಿಯೂ ಉಳಿಸಿಕೊಳ್ಳುವುದು ಪ್ರದೇಶದ ಜನರ ಬೇಡಿಕೆ ಮತ್ತು ಆಕಾಂಕ್ಷೆಗಳನ್ನು ಪೂರೈಸುತ್ತದೆ.

 

*****