Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಪ್ರಧಾನಿ ಚರ್ಚೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಇಡೀ ವಿಶ್ವವೇ ಇಂದು COVID19  ಗಂಭೀರ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿಪ್ರಸ್ತುತ ಪರಿಸ್ಥಿತಿ ಮಾನವಕುಲದ ಇತಿಹಾಸದಲ್ಲಿ ಒಂದು ಯುಗ ಬದಲಾವಣೆಯ ಘಟನೆಯಾಗಿದ್ದುಇದರ ಪರಿಣಾಮವನ್ನು ಎದುರಿಸಲು ನಾವು ಸಿದ್ಧರಿಬೇಕು ಎಂದರುಸಾಂಕ್ರಾಮಿಕ ರೋಗದ ವಿರುದ್ಧದ  ಹೋರಾಟದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿರುವುದನ್ನು ಅವರು ಶ್ಲಾಘಿಸಿದರು ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ರಾಜಕೀಯದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಮೂಲಕ ದೇಶವು ರಚನಾತ್ಮಕ ಮತ್ತು ಸಕಾರಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಪ್ರಯತ್ನದಲ್ಲಿ ಪ್ರತಿಯೊಬ್ಬ ನಾಗರಿಕನು ಸಾಮಾಜಿಕ ಅಂತರಜನತಾ ಕರ್ಫ್ಯೂ ಅಥವಾ ಲಾಕ್ಡೌನ್ ಹೀಗೆ ಯಾವುದೇ ಇರಲಿ ಅದರ ಅನುಸರಣೆಯಲ್ಲಿ ಶಿಸ್ತುಸಮರ್ಪಣೆ ಮತ್ತು ಬದ್ಧತೆಯ ಮೂಲಕ ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು.  

ಸಂಪನ್ಮೂಲಗಳ ಮಿತಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಪರಿಣಾಮದ ಬಗ್ಗೆ ಪ್ರಧಾನಿ ಒತ್ತಿಹೇಳಿದರುಆದರೂವೈರಸ್ ಹರಡುವ ವೇಗವನ್ನು ನಿಯಂತ್ರಿಸಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಮತ್ತು ನಾವು ಯಾವಾಗಲೂ ಜಾಗರೂಕತೆಯಿಂದ ಇರಬೇಕು ಎಂದು ಅವರು ಎಚ್ಚರಿಸಿದರು.

ದೇಶದ ಪರಿಸ್ಥಿತಿ ‘ಸಾಮಾಜಿಕ ತುರ್ತುಸ್ಥಿತಿಗೆಸಮಾನವಾಗಿದೆ ಎಂದು ಪ್ರಧಾನಿ ಹೇಳಿದರುಪರಿಸ್ಥಿತಿಯು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮತ್ತು ಜಾಗರೂಕರಾಗಿ ಮುಂದುವರಿಯುವಂತೆ ಮಾಡಿದೆ ಎಂದರುಲಾಕ್ಡೌನ್ ವಿಸ್ತರಿಸುವಂತೆ ಹಲವಾರು ರಾಜ್ಯ ಸರ್ಕಾರಗಳುಜಿಲ್ಲಾಡಳಿತಗಳು ಮತ್ತು ತಜ್ಞರು ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಬದಲಾಗುತ್ತಿರುವ ಸನ್ನಿವೇಶಗಳಲ್ಲಿದೇಶವು ತನ್ನ ಕೆಲಸದ ಸಂಸ್ಕೃತಿ ಮತ್ತು ಕಾರ್ಯ ಶೈಲಿಯಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದರುಸರ್ಕಾರದ ಆದ್ಯತೆಯು ಪ್ರತಿಯೊಂದು ಜೀವವನ್ನೂ ಉಳಿಸುವುದೇ ಆಗಿದೆ ಎಂದು ಹೇಳಿದರು. COVID-19  ಪರಿಣಾಮವಾಗಿ ದೇಶವು ಗಂಭೀರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸೌಲಭ್ಯಗಳ ವಿತರಣೆಯ ಪರಿಸ್ಥಿತಿ ಸೇರಿದಂತೆ ಹೊಸ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದರು.

ಸಭೆ ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ನಾಯಕರುಕೈಗೊಂಡ ಸಮಯೋಚಿತ ಕ್ರಮಗಳನ್ನು ಶ್ಲಾಘಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶವು ಅವರ ಬೆಂಬಲಕ್ಕೆಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರುಆರೋಗ್ಯ ಕಾರ್ಯಕರ್ತರ ಆರೋಗ್ಯ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸುವುದುಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದುಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವ ಅಗತ್ಯತೆ ಮತ್ತು ಹಸಿವು ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವ ಬಗ್ಗೆ ಪಕ್ಷಗಳ ನಾಯಕರು ಮಾತನಾಡಿದರುಸಾಂಕ್ರಾಮಿಕ ರೋಗದ ವಿರುದ್ಧದ  ಯುದ್ಧದಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವ ಆರ್ಥಿಕ ಮತ್ತು ಇತರ ನೀತಿ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರುಲಾಕ್ಡೌನ್ ವಿಸ್ತರಿಸುವ ಬಗ್ಗೆ ಮತ್ತು ಲಾಕ್ಡೌನ್ ನ್ನು ಹಂತಹಂತವಾಗಿ ತೆಗೆಯುವ ಬಗ್ಗೆ ನಾಯಕರು ಸಲಹೆಗಳನ್ನು ನೀಡಿದರು.

ನಾಯಕರ ರಚನಾತ್ಮಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಿಯವರು ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವ ಅವರ ಬದ್ಧತೆಯು ದೇಶದ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಪುನರುಚ್ಚರಿಸುತ್ತದೆ ಎಂದರು.

ಕೇಂದ್ರ ಸಂಸದೀಯ ಸಚಿವರುಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು.

 

 

PM India

***