ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದಲ್ಲಿಂದು ವಿವಿಧ ಕೈಗಾರಿಕಾ ವಲಯದ ಸಿಇಒಗಳೊಂದಿಗೆ ಸಂವಾದ ನಡೆಸಿದರು. ಮುಂದಿನ ಆಯವ್ಯಯ ಪೂರ್ವದಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಎರಡನೇ ಸಂವಾದ ಇದಾಗಿದೆ.
ಕೋವಿಡ್ ನಂತರದ ಸಮಯದಲ್ಲಿ ಪ್ರದರ್ಶಿಸಲಾದ ದೇಶದ ಅಂತರ್ಗತ ಶಕ್ತಿಯ ಕುರಿತು ಪ್ರಧಾನಮಂತ್ರಿಯವರು ಮಾತನಾಡಿದರು. ಉದ್ಯಮ ವಲಯ ಸಲಹೆಗಳು ಮತ್ತು ಒಳನೋಟ ನೀಡಿರುವ ಬಗ್ಗೆ ಉದ್ಯಮ ಕ್ಷೇತ್ರದ ಪ್ರಮುಖರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಸಲ್ಲಿಸಿದರು. ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹ – ಪಿಎಲ್ಐ ನಂತಹ ನೀತಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಉದ್ಯಮ ವಲಯವನ್ನು ಉತ್ತೇಜಿಸಿದರು. ಇತ್ತೀಚೆಗೆ ಮುಕ್ತಾಯವಾದ ಒಲಿಂಪಿಕ್ಸ್ ವೇದಿಕೆಯಲ್ಲಿನ ಸಾಧನೆಯಂತೆಯೇ ಪ್ರತಿವಲಯದಲ್ಲಿ ಭಾರತದ ಕೈಗಾರಿಕೆಗಳು ವಿಶ್ವದ ಅಗ್ರ ಐದು ಸ್ಥಾನಗಳ ಒಳಗೆ ನೋಡಲು ದೇಶ ಬಯಸುತ್ತದೆ ಮತ್ತು ನಾವು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಕಾರ್ಪೋರೇಟ್ ವಲಯ ಕೃಷಿ ಮತ್ತು ಆಹಾರ ಸಂಸ್ಕರಣೆಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ ಹಾಗೂ ನೈಸರ್ಗಿಕ ಕೃಷಿಯತ್ತ ಗಮ್ಮ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳಿದರು. ಸರ್ಕಾರದ ನೀತಿ, ಸ್ಥಿರತೆ ಕುರಿತು ಒತ್ತಿ ಹೇಳಿದ ಅವರು, ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉಪಕ್ರಮಗಳನ್ನು ಕೈಗೊಳ್ಳಲು ಸರ್ಕಾರ ದೃಢವಾದ ಬದ್ಧತೆ ಹೊಂದಿದೆ ಎಂದು ಹೇಳಿದರು. ಹೊರೆಯನ್ನು ಕಡಿಮೆ ಮಾಡುವ ಕುರಿತು ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಬೇಕಾದ ಕ್ಷೇತ್ರಗಳ ಕುರಿತು ಕೈಗಾರಿಕಾ ವಲಯದಿಂದ ಸಲಹೆಗಳನ್ನು ಕೇಳಿದರು.
ಕೈಗಾರಿಕಾ ವಲಯದ ಪ್ರತಿನಿಧಿಗಳು ಪ್ರಧಾನಮಂತ್ರಿಯವರಿಗೆ ತಮ್ಮ ಪ್ರತಿಕ್ರಿಯೆ ನೀಡಿದರು. ಖಾಸಗಿ ವಲಯದ ಮೇಲೆ ಪ್ರಧಾನಮಂತ್ರಿಯವರು ಇಟ್ಟಿರುವ ನಂಬಿಕೆಗೆ ಧನ್ಯವಾದ ಸಲ್ಲಿಸಿದರು. ತಮ್ಮ ನಾಯಕತ್ವದಿಂದಾಗಿ ಕೋವಿಡ್ ನಂತರದಲ್ಲಿ ದೇಶ ಚೇತರಿಕೆ ಹಾದಿಯಲ್ಲಿದೆ ಮತ್ತು ಸುಧಾರಣೆಯಲ್ಲಿ ಪರಿವರ್ತನೆ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಂತ್ರಿಯವರ ಆತ್ಮ ನಿರ್ಭರ ಭಾರತ ನಿರ್ಮಿಸುವ ವಿಷಯದಲ್ಲಿ ಖಾಸಗಿ ವಲಯದ ಪ್ರಮುಖರು ಬದ್ಧತೆ ವ್ಯಕ್ತಪಡಿಸಿದರು. ಪಿಎಂ ಗತಿಶಕ್ತಿ, ಐಬಿಸಿ ಒಳಗೊಂಡಂತೆ ಹಲವು ವಲಯಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ದೇಶದಲ್ಲಿ ಸುಗಮ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಹೆಜ್ಜೆಗಳ ಬಗ್ಗೆಯೂ ಮಾತನಾಡಿದರು. ಕಾಪ್26 ವಿಷಯದಲ್ಲಿ ಭಾರತದ ಬದ್ಧತೆ ಮತ್ತು ಕೈಗಾರಿಕೆಗಳು ಈ ಗುರಿಯನ್ನು ಸಾಧಿಸಲು ಕೊಡುಗೆ ನೀಡುವ ಕುರಿತು ಮಾತನಾಡಿದರು.
ಉದ್ಯಮಿ ಶ್ರೀ ಟಿ.ವಿ. ನರೇಂದ್ರನ್ ಮಾತನಾಡಿ, ಕೋವಿಡ್ ನಂತರ ಸರ್ಕಾರ ಸಕಾಲಕ್ಕೆ ಸ್ಪಂದಿಸಿದ ಪರಿಣಾಮ ವಿ ಆಕಾರದಲ್ಲಿ ಆರ್ಥಿಕ ಚೇತರಿಕೆಗೆ ಕಾರಣವಾಗಿದೆ ಎಂದರು. ಶ್ರೀ ಸಂಜೀವ್ ಪುರಿ ಅವರು ಆಹಾರ ಸಂಸ್ಕರಣಾ ಕೈಗಾರಿಕೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಸಲಹೆ ಮಾಡಿದರು. ಶ್ರೀ ಉದಯ ಕೋಟಕ್ ಮಾತನಾಡಿ ಪ್ರಧಾನಮಂತ್ರಿಯರು ಸ್ವಚ್ಛ ಭಾರತ, ನವೋದ್ಯಮ ಮತ್ತಿತರ ವಲಯಗಳಲ್ಲಿ ಸರಳ, ಸುಂದರ ಮತ್ತು ಸ್ಪಷ್ಟವಾದ ಸುಧಾರಣೆಗಳನ್ನು ತರುವ ಪಥ ಬದಲಾವಣೆಗೆ ಕಾರಣರಾಗಿದ್ದಾರೆ ಎಂದರು. ಶ್ರೀ ಶೇಷಗಿರಿ ರಾವ್ ಮಾತನಾಡಿ, ಅವಧಿ ಮೀರಿದ ವಾಹನಗಳನ್ನು ನಾಶಪಡಿಸುವ ನೀತಿ ಮತ್ತಷ್ಟು ಸಮಗ್ರವಾಗಿರಬೇಕು ಎಂದರು. ಶ್ರೀ ಕೆನಿಚಿ ಆಯಕವ ಅವರು ಭಾರತ ಉತ್ಪಾದನಾ ವಲಯದಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮುವ ಪ್ರಧಾನಮಂತ್ರಿಯವರ ಬದ್ಧತೆ ಸಾಕಾರಗೊಳ್ಳಬೇಕು ಎಂದು ಹೇಳಿದರು. ಶ್ರೀ ವಿನಿತ್ ಮಿತ್ತಲ್ ಅವರು ಪ್ರಧಾನಮಂತ್ರಿಯರ ಕಾಪ್ 26 ಪಂಚಸೂತ್ರ ಬದ್ಧತೆ ಕುರಿತು ಮಾತನಾಡಿದರು. ಶ್ರೀ ಸುಮಂತ್ ಸಿನ್ಹಾ ಮಾತನಾಡಿ, ಗ್ಲಾಸ್ಗೋದಲ್ಲಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಜಾಗತಿಕ ಸಮುದಾಯ ಹೆಚ್ಚಿನ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು. ಶ್ರೀಮತಿ ಪ್ರೀತಾ ರೆಡ್ಡಿ ಮಾತನಾಡಿ ಆರೋಗ್ಯ ವಲಯದಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸಲು ಹೆಜ್ಜೆ ಇಡಬೇಕು ಎಂದರು. ಶ್ರೀ ರಿತೇಶ್ ಅಗರ್ ವಾಲ್ ಮಾತನಾಡಿ, ಬೆಳವಣಿಗೆ ಕಾಣುತ್ತಿರುವ ಮತ್ತು ಮೆಷಿನ್ ಲರ್ನಿಂಗ್ ವಲಯದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಕಡೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳಿದರು.
***
Interacted with leading CEO’s from different sectors. We discussed various aspects relating to the economy. The CEOs shared insightful suggestions for the upcoming Budget. I spoke about India’s reform trajectory over the last few years. https://t.co/nlRiPXC4Z4
— Narendra Modi (@narendramodi) December 20, 2021