Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ 


ಪ್ರಧಾನಿ ಶ್ರೀ. ನರೇಂದ್ರ ಮೋದಿಯವರ ಎನ್ ಡಿ ಎ ಸರ್ಕಾರದ ಧ್ಯೇಯ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’.ಜನರಿಗೆ ನೀಡಿದ ಭರವಸೆಗಳನ್ನು  ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ.ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಮುಸ್ಲಿಂ ಮಹಿಳೆಯರ (ವಿವಾಹದಲ್ಲಿ ಹಕ್ಕುಗಳ ರಕ್ಷಣೆ) ಮಸೂದೆ, 2019ಕ್ಕೆ ಅನುಮೋದನೆ ನೀಡಿದೆ. ಈ ಮಸೂದೆಯು ಮುಸ್ಲಿಂ ಮಹಿಳೆಯರ (ವಿವಾಹದಲ್ಲಿ ಹಕ್ಕುಗಳ ರಕ್ಷಣೆ) ಎರಡನೇ ಸುಗ್ರೀವಾಜ್ಞೆ, 2019 ( ಆರ್ಡರ್ 4, 2019)  ನ್ನು ಬದಲಿಸಲಿದೆ.

 

ಪರಿಣಾಮ:

 

ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಲಿಂಗ ಸಮಾನತೆ ಹಾಗೂ ಲಿಂಗ ನ್ಯಾಯವನ್ನು ಖಾತ್ರಿಪಡಿಸುತ್ತದೆ. ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಪತಿಯರ ‘ತಲಾಕ್-ಇ-ಬಿದ್ದತ್’ ಅಭ್ಯಾಸದಿಂದ ವಿಚ್ಛೇದನವನ್ನು ತಡೆಗಟ್ಟುವಲ್ಲಿ ಮಸೂದೆ ಸಹಾಯ ಮಾಡುತ್ತದೆ. ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು.

 

ಪರಿಣಾಮಗಳು:

 

·         ತ್ರಿವಳಿ ತಲಾಕ್ ಅಭ್ಯಾಸವನ್ನು ಅನೂರ್ಜಿತ ಮತ್ತು ಕಾನೂನುಬಾಹಿರ ಎಂದು ಘೋಷಿಸಲು ಮಸೂದೆ ಪ್ರಸ್ತಾವಿಸುತ್ತದೆ.

 

·         ಈ ಅಪರಾಧಕ್ಕಾಗಿ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ನೀಡುತ್ತದೆ.

 

·         ವಿವಾಹಿತ ಮುಸ್ಲಿಂ ಮಹಿಳೆ  ಮತ್ತು ಅವಲಂಬಿತ ಮಕ್ಕಳಿಗೆ ಜೀವನಾಧಾರ ಭತ್ಯೆಯನ್ನು ಸಹ ಒದಗಿಸುತ್ತದೆ.

 

 

 

·         ಈ ಮಸೂದೆಯಡಿ ತಲಾಖ್ ನೀಡುವುದನ್ನು ಅಪರಾಧ ಆರೋಪ ಎಂದು ಪರಿಗಣಿಸಲಾಗುವುದು. ಯಾವುದೇ ರಕ್ತ ಸಂಬಂಧಿ ಅಥವಾ ವಿವಾಹವಾದ ವ್ಯಕ್ತಿಯಿಂದ ತಲಾಖ್ ಪಡೆದ ಮುಸ್ಲಿಂ ಮಹಿಳೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ದೂರು ಅಥವಾ ಮಾಹಿತಿ ನೀಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದು.

 

 

·        ತಲಾಖ್ ಹೇಳಿಸಿಕೊಂಡ ವಿವಾಹಿತ ಮುಸ್ಲಿಂ ಮಹಿಳೆಯ ದೃಷ್ಟಿಯಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಈ ಅಪರಾಧವನ್ನು ಸಂಯೋಜಿಸಬಹುದಾಗಿದೆ.

 

·         ಮ್ಯಾಜಿಸ್ಟ್ರೇಟ್ ರವರು  ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ತಲಾಖ್ ಹೇಳಿಸಿಕೊಂಡ ವಿವಾಹಿತ ಮುಸ್ಲಿಂ ಮಹಿಳೆಯನ್ನು ವಾದ ಕೇಳಲು ಮಸೂದೆ ಅವಕಾಶ ಒದಗಿಸುತ್ತದೆ.

 

2019 ರ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆಯ) ಮಸೂದೆಯು, 2019 ರ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಎರಡನೆಯ ಸುಗ್ರೀವಾಜ್ಞೆ 2019 ರಂತೆಯೇ ಇದೆ.