Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಯಟ್ನಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ (2016ರ ಸೆಪ್ಟೆಂಬರ್ 03)ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ

ವಿಯಟ್ನಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ (2016ರ ಸೆಪ್ಟೆಂಬರ್ 03)ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ


ಘನತೆವೆತ್ತ ಪ್ರಧಾನಮಂತ್ರಿ ನ್ಗುಯೇನ್ ಕ್ಸುವಾನ್ ಪುಕ್ ಅವರೇ,

ಮಾಧ್ಯಮದ ಸದಸ್ಯರೇ,

ಘನತೆವೆತ್ತರೇ, ನಿಮ್ಮ ಆತ್ಮೀಯ ಆಹ್ವಾನದ ಮಾತುಗಳಿಗೆ ಮತ್ತು ನನಗೆ ಹಾಗೂ ನನ್ನ ನಿಯೋಗಕ್ಕೆ ನೀವು ನೀಡಿದ ಆತಿಥ್ಯಕ್ಕೆ ಧನ್ಯವಾದಗಳು. ಇಂದು ಬೆಳಗ್ಗೆ ತಾವು ಸ್ವತಃ ಹೋ ಚಿ ಮಿನ್ಹ್ ಅವರ ಗೃಹವನ್ನು ತೋರಿಸುವ ಮೂಲಕ ವಿಶೇಷ ಗೌರವ ನೀಡಿದ್ದೀರಿ. ಹೋ ಚಿ ಮಿನ್ಹ್ ಅವರು 20ನೇ ಶತಮಾನದ ಎತ್ತರದ ನಾಯಕರಾಗಿದ್ದರು. ಈ ಅವಕಾಶ ನೀಡಿದ್ದಕ್ಕಾಗಿ ಘನತೆವೆತ್ತರೆ ನಿಮಗೆ ಧನ್ಯವಾದಗಳು. ಜೊತೆಗೆ ನಾನು ನಿನ್ನೆಯಷ್ಟೇ ರಾಷ್ಟ್ರೀಯ ದಿನ ಆಚರಿಸಿದ ವಿಯಟ್ನಾಂನ ಎಲ್ಲ ಜನತೆಗೂ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ.

ಸ್ನೇಹಿತರೇ,

ನಮ್ಮ ಸಮಾಜಗಳ ನಡುವಿನ ನಂಟು 2000 ವರ್ಷಗಳ ಹಿಂದಕ್ಕೆ ಹೋಗುತ್ತದೆ. ಭಾರತದಿಂದ ವಿಯಟ್ನಾಂಗೆ ಭೌದ್ಧ ಮತದ ಆಗಮನ ಮತ್ತು ವಿಯಟ್ನಾಂನಲ್ಲಿರುವ ಛಾಮ್ ದೇವಾಲಯಗಳ ಸ್ಮಾರಕಗಳು ಈ ಬಾಂಧವ್ಯಕ್ಕೆ ಸಾಕ್ಷಿಯಾಗಿವೆ. ನಮ್ಮ ಪೀಳಿಗೆಯ ಜನರಿಗೆ, ವಿಯಟ್ನಾಂ ತನ್ನ ಹೃದಯದಲ್ಲಿ ವಿಶಿಷ್ಟ ಸ್ಥಾನವನ್ನು ನೀಡಿದೆ. ವಹಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯ ಪಡೆಯಲು ವಿಯಟ್ನಾಂ ಜನತೆ ತೋರಿದ ಶೌರ್ಯ ನಿಜವಾದ ಸ್ಫೂರ್ತಿಯಾಗಿದೆ. ಮತ್ತು ನಿಮ್ಮ ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರ ನಿರ್ಮಾಣ ಬದ್ಧತೆ ನಿಮ್ಮ ಜನರ ಪಾತ್ರದ ಶಕ್ತಿ ಪ್ರತಿಫಲಿಸುತ್ತದೆ. ಭಾರತದಲ್ಲಿ ನಾವು ನಿಮ್ಮ ಸಂಕಲ್ಪವನ್ನು ಮೆಚ್ಚಿದ್ದೇವೆ. ನಿಮ್ಮ ಯಶಸ್ಸಿಗೆ ನಾವು ಹಿಗ್ಗಿದ್ದೇವೆ ಮತ್ತು ನಿಮ್ಮ ರಾಷ್ಟ್ರೀಯ ಪಯಣದುದ್ದಕ್ಕೂ ನಾವು ನಿಮ್ಮೊಂದಿಗಿದ್ದೇವೆ.

ಸ್ನೇಹಿತರೇ,

ನಾನು ಪ್ರಧಾನಮಂತ್ರಿ ಫುಕ್ ಅವರೊಂದಿಗೆ ನಡೆಸಿದ ಸಂಭಾಷಣೆ, ವಿಸ್ತೃತ ಮತ್ತು ಫಲಪ್ರದವಾಗಿತ್ತು. ನಾವು ಸಂಪೂರ್ಣವಾಗಿ ದ್ವಿಪಕ್ಷೀಯ ಮತ್ತು ಬಹುಹಂತದ ಸಹಕಾರದ ಬಗ್ಗೆ ಚರ್ಚಿಸಿದ್ದೇವೆ. ನಾವು ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಬಲಪಡಿಸಲು ಮತ್ತು ಉನ್ನತ ಸ್ಥರಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಈ ವಲಯದ ಎರಡು ಮಹತ್ವದ ರಾಷ್ಟ್ರಗಳಾಗಿ, ನಾವು ನಮಾನ ಕಾಳಜಿಯ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ನಮ್ಮ ಬಾಂಧವ್ಯವನ್ನು ಹೆಚ್ಚಿಸಬೇಕೆಂಬುದನ್ನು ಅಭಿಪ್ರಾಯಪಟ್ಟಿದ್ದೇವೆ. ನಾವು ವಲಯದಲ್ಲಿ ವೃದ್ಧಿಸುತ್ತಿರುವ ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ನಾವು ಪ್ರಾದೇಶಿಕವಾಗಿ ಹೊರಹೊಮ್ಮುತ್ತಿರುವ ಸವಾಲುಗಳಿಗೆ ಸ್ಪಂದಿಸಲು ಸಹಕಾರದ ಅಗತ್ಯವನ್ನು ಗುರುತಿಸಿದ್ದೇವೆ. ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರಾತ್ಮಕ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸುವ ನಮ್ಮ ನಿರ್ಧಾರ ನಮ್ಮ ಭವಿಷ್ಯದ ಸಹಕಾರದ ಹಾದಿಯನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ. ಇದು ನಮ್ಮ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ದಿಕ್ಕು, ಆವೇಗ ಮತ್ತು ವಿಷಯ ಒದಗಿಸುತ್ತದೆ. ನಮ್ಮ ಸಮಾನ ಪ್ರಯತ್ನವು ವಲಯದ ಸ್ಥಿರತೆ, ಭದ್ರತೆ ಮತ್ತು ಪ್ರಗತಿಗೂ ಕೊಡುಗೆ ನೀಡಲಿದೆ.

ಸ್ನೇಹಿತರೆ,

ನಮ್ಮ ಜನತೆಗೆ ಆರ್ಥಿಕ ಪ್ರಗತಿ ತರುವ ನಮ್ಮ ಪ್ರಯತ್ನಕ್ಕೆ ಅವುಗಳನ್ನು ಪಡೆಯುವ ಕ್ರಮದ ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಪ್ರಧಾನಮಂತ್ರಿಯವರು ಹಾಗೂ ನಾನು, ಹೀಗಾಗಿ, ನಮ್ಮ ಸಮಾನ ಹಿತಾಸಕ್ತಿಯನ್ನು ಮುಂದುವರಿಸಲು ನಮ್ಮ ರಕ್ಷಣೆ ಮತ್ತು ಭದ್ರತೆ ಕಾರ್ಯಕ್ರಮಗಳನ್ನು ಆಳಗೊಳಿಸಲು ಒಪ್ಪಿದ್ದೇವೆ. ನಮ್ಮರಕ್ಷಣಾ ಕಾರ್ಯಕ್ರಮಕ್ಕೆ ಮೂರ್ತರೂಪ ನೀಡಲು ಇಂದು ಬೆಳಗ್ಗೆ ನಾವು ಸಹಿ ಹಾಕಿದ ಕಡಲತಟದಾಚೆಯ ಗಸ್ತು ದೋಣಿಗಳ ನಿರ್ಮಾಣದ ಒಪ್ಪಂದ ಅಂಥ ಕ್ರಮಗಳಲ್ಲಿ ಒಂದಾಗಿದೆ. ಆಳವಾದ ರಕ್ಷಣಾ ಸಹಕಾರಕ್ಕಾಗಿ ನಾನು ವಿಯಟ್ನಾಂಗೆ 500 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಹೊಸ ರಕ್ಷಣಾ ಲೈನ್ ಆಪ್ ಕ್ರೆಡಿಟ್ ಘೋಷಿಸಲು ಸಂತೋಷ ಪಡುತ್ತೇನೆ. ಕೆಲವೇ ಹೊತ್ತಿನ ಮೊದಲು ಅಂಕಿತ ಹಾಕಲಾದ ಒಪ್ಪಂದಗಳು ನಮ್ಮ ವೈವಿಧ್ಯತೆ ಮತ್ತು ಸಹಕಾರದ ಆಳದ ಕೇಂದ್ರಬಿಂದುವಾಗಿವೆ.

ಸ್ನೇಹಿತರೇ,

ವಿಯಟ್ನಾಂ ತ್ವರಿತ ಅಭಿವೃದ್ಧಿ ಮತ್ತು ಬಲವಾದ ಆರ್ಥಿಕ ಪ್ರಗತಿಯನ್ನು ಹೊಂದುತ್ತಿದೆ.

ವಿಯಟ್ನಾಂ ಬಯಸುತ್ತಿರುವುದು:

· ತನ್ನ ಜನರ ಸಬಲೀಕರಣ ಮತ್ತು ಉತ್ಕೃಷ್ಟಗೊಳಿಸುವುದಾಗಿದೆ;

· ಅದರ ಕೃಷಿಯನ್ನು ಆಧುನೀಕರಿಸುವುದಾಗಿದೆ;

· ಉದ್ಯಮಶೀಲತೆ ಮತ್ತು ನಾವಿನ್ಯವನ್ನು ಉತ್ತೇಜಿವುದಾಗಿದೆ.;

· ಅದರ ವಿಜ್ಞಾನ ಮತ್ತು ತಂತ್ರಜ್ಞಾನದ ನೆಲೆಯನ್ನು ಬಲಪಡಿಸುವುದಾಗಿದೆ;

· ತ್ವರಿತ ಆರ್ಥಿಕ ಅಭಿವೃದ್ಧಿಗಾಗಿ ಹೊಸ ಸಾಂಸ್ಥಿಕ ಸಾಮರ್ಥ್ಯ ಸೃಷ್ಟಿಸುವುದು.; ಮತ್ತು

· ಆಧುನಿಕ ರಾಷ್ಟ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವದು.

ಭಾರತ ಮತ್ತು ಅದರ 125 ಕೋಟಿ ಜನರು ವಿಯಟ್ನಾಂನೊಂದಿಗೆ ಪಾಲುದಾರರಾಗಲು ಮತ್ತು ಗೆಳೆತರನ ಪಯಣದಲ್ಲಿ ಸೇರಲು ಸಿದ್ಧರಾಗಿದ್ದಾರೆ. ನಾನು ಮತ್ತು ಪ್ರಧಾನಮಂತ್ರಿಯವರು ನಮ್ಮ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಂಕಲ್ಪಿಸಿ ಹಲವು ನಿರ್ಧಾರ ಕೈಗೊಂಡಿದ್ದೇವೆ. ನಹಾ ಟ್ರಾಂಗ್ ನಲ್ಲಿನ ಟೆಲಿ ಕಮ್ಯೂನಿಕೇಷನ್ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಭಾರತವು 5 ದಶಲಕ್ಷ ಅಮೆರಿಕನ್ ಡಾಲರ್ ಅನುದಾನವನ್ನು ನೀಡಲು ಪ್ರಸ್ತಾಪಿಸಿದೆ. ಬಾಹ್ಯಾಕಾಶ ಸಹಕಾರದ ಒಪ್ಪಂದದ ಚೌಕಟ್ಟು ವಿಯಟ್ನಾಂಗೆ ತನ್ನ ರಾಷ್ಟ್ರೀಯ ಅಭಿವೃದ್ಧಿ ಉದ್ದೇಶ ಈಡೇರಿಕೆಗಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಕೈಜೋಡಿಸಲು ಅವಕಾಶ ನೀಡುತ್ತದೆ. ದ್ವಿಪಕ್ಷೀಯ ವಾಣಿಜ್ಯ ಕಾರ್ಯಕ್ರಮಗಳನ್ನು ಹೆಚ್ಚಿಸುವುದೂ ನಮ್ಮ ಕಾರ್ಯತಂತ್ರಾತ್ಮಕ ಉದ್ದೇಶವಾಗಿದೆ. 2020ರ ಹೊತ್ತಿಗೆ ಹದಿನೈದು ಶತಕೋಟಿ ಡಾಲರ್ ವಾಣಿಜ್ಯ ಗುರಿ ಹೊಂದಿದ್ದು ಈ ಗುರಿ ಸಾಧನೆಗಾಗಿ ವಾಣಿಜ್ಯ ಮತ್ತು ವ್ಯಾಪಾರ ಹೊಸ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ನಾನು ವಿಯಟ್ನಾಂನಲ್ಲಿ ಪ್ರಸ್ತುತ ನಡೆಯುತ್ತಿರುವ ಭಾರತೀಯ ಯೋಜನೆಗಳ ಮತ್ತು ಹೂಡಿಕೆಯನ್ನು ಸುಗಮಗೊಳಿಸಲೂ ಕೋರಿದ್ದೇನೆ. ಮತ್ತು ನನ್ನ ಸರ್ಕಾರದ ವಿವಿಧ ಮಹತ್ವಾಕಾಂಕ್ಷೆಯ ಯೋಜನೆಗಳ ಮತ್ತು ಕಾರ್ಯಕ್ರಮಗಳ ಲಾಭವನ್ನು ಪಡೆಯಲೂ ವಿಯಟ್ನಾಂನ ಕಂಪನಿಗಳಿಗೆ ನಾನು ಆಹ್ವಾನ ನೀಡಿದ್ದೇನೆ.

ಸ್ನೇಹಿತರೇ,

ನಮ್ಮ ಜನರ ನಡುವಿನ ಸಾಂಸ್ಕೃತಿಕ ಬಾಂಧವ್ಯ ಶತಮಾನಗಷ್ಟು ಹಳೆಯದು. ನಾವು ಹನೋಯ್ ನಲ್ಲಿ ಅತಿ ಶೀಘ್ರವೇ ಭಾರತೀಯ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಮತ್ತು ತೆರೆಯುವ ವಿಶ್ವಾಸಹೊಂದಿದ್ದೇವೆ. ಮೈ ಸನ್ ನಲ್ಲಿ ಛಾಮ್ ಸ್ಮಾರಕಗಳ ಸಂರಕ್ಷಣೆ ಮತ್ತು ಪುನರ್ ಸ್ಥಾಪನೆ ಕಾರ್ಯಕ್ಕಾಗಿ ಭಾರತೀಯ ಪುರಾತತ್ವ ಇಲಾಖೆಯು ಶೀಘ್ರವೇ ಮಾತುಕತೆ ಆರಂಭಿಸಲಿದೆ. ಈ ವರ್ಷದ ಆರಂಭದಲ್ಲಿ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಕ್ಕಾಗಿ ನಳಂದ ಮಹಾ ವಿಹಾರದ ಶಾಸನ ಒದಗಿಸಿದ್ದಕ್ಕಾಗಿ ವಿಯಟ್ನಾಂ ಆಡಳಿತಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ.

ಸ್ನೇಹಿತರೇ,

ಭೌಗೋಳಿಕ ಆಪ್ಯಾಯತೆ, ಸಾಂಸ್ಕೃತಿಕ ಸಂಬಂಧ ಮತ್ತು ನಾವು ಹಂಚಿಕೊಂಡ ಕಾರ್ಯತಂತ್ರಾತ್ಮಕ ಜಾಗಗಳ ವಿಚಾರದಲ್ಲಿ ಆಸಿಯಾನ್ ಐತಿಹಾಸಿಕ ನಂಟಿಗಾಗಿ ಭಾರತಕ್ಕೆ ಮಹತ್ವದ್ದಾಗಿದೆ. ಇದು ನಮ್ಮ ಪೂರ್ವದತ್ತ ಕಾರ್ಯ ನೀತಿಗೆ ಕೇಂದ್ರವಾಗಿದೆ. ಭಾರತಕ್ಕೆ ಆಸಿಯಾನ್ ಸಂಚಾಲಕನಾಗಿ ವಿಯಟ್ನಾಂ ನಾಯಕತ್ವದಲ್ಲಿ ನಾವು ಭಾರತ-ಆಸಿಯಾನ್ ಪಾಲುದಾರಿಕೆಯನ್ನು ಎಲ್ಲ ಕ್ಷೇತ್ರದಲ್ಲೂ ಬಲಪಡಿಸಲು ಒಗ್ಗೂಡಿ ಕೆಲಸ ಮಾಡಲಿದ್ದೇವೆ.

ಘನತೆವೆತ್ತರೇ,

ನೀವು ಉದಾರವಾದ ಆತಿಥ್ಯ ನೀಡಿದ್ದೀರಿ. ವಿಯಟ್ನಾಂ ಜನತೆ ತೋರಿದ ಮಮತೆ ನನ್ನ ಹೃದಯ ತಟ್ಟಿದೆ. ನಾವು ಪ್ರಕೃತಿ ಮತ್ತು ನಮ್ಮ ಪಾಲುದಾರಿಕೆಯ ದಿಕ್ಕಿನಿಂದ ತೃಪ್ತಿ ಪಡೆದಿದ್ದೇವೆ. ಅದೇ ವೇಳೆ ನಾವು ನಮ್ಮ ಬಾಂಧವ್ಯದ ವೇಗವನ್ನು ಕಾಯ್ದುಕೊಳ್ಳಲು ಗಮನ ಹರಿಸುತ್ತೇವೆ. ನಾನು ನಿಮ್ಮ ಆತಿಥ್ಯವನ್ನು ಆನಂದಿಸಿದ್ದೇನೆ. ಭಾರತದಲ್ಲಿ ವಿಯಟ್ನಾಂ ನಾಯಕತ್ವಕ್ಕೆ ಮತ್ತು ತಮಗೆ ಆತಿಥ್ಯ ನೀಡುವುದು ನನ್ನ ಸೌಭಾಗ್ಯವಾಗಿದೆ. ನಿಮ್ಮನ್ನು ಭಾರತದಲ್ಲಿ ಸ್ವಾಗತಿಸಲು ನಾವು ಕಾತರರಾಗಿದ್ದೇವೆ.

ಧನ್ಯವಾದಗಳು

****

AKT/SH-